


ಮಹಾರಾಷ್ಟ್ರ:
ಚಲಿಸುತ್ತಿದ್ದ ಬಸ್ಸಿನ ಸ್ಟೇರಿಂಗ್ ರಾಡ್ ಕಟ್ ಆಗಿ ಬಸ್ಸಿನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರು ಚಮತ್ಕಾರಿ ರೀತಿಯಲ್ಲಿ ಭೀಕರ ಅಪಘಾತದಿಂದ ಪಾರಾಗಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಕನ್ನಡ ಘಾಟ್ ನಲ್ಲಿ ಈ ಅವಘಡ ಅಂಭವಿಸಿದ್ದು
ಛತ್ರಪತಿ ಸಂಭಾಜಿನಗರದಿಂದ ಸೂರತ್ ಗೆ ತೆರಳುತ್ತಿದ್ದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ಸು ಪ್ರಯಾಣಿಸುತ್ತಿತ್ತು ಎನ್ನಲಾಗಿದೆ.ಬಸ್ಸು ಜಲಗಾಂವ್ ಜಿಲ್ಲೆಯ ಕನ್ನಡ ಘಾಟಗೆ ತಲುಪಿದ ವೇಳೆ ಬಸ್ಸಿನ ಸ್ಟೇರಿಂಗ್ ರಾಡ್ ಕಟ್ ಆಗಿ ಚಾಲಕನ ನಿಯಂತ್ರ ತಪ್ಪಿ ಸಂರಕ್ಷಣಾ ಗೋಡೆಗೆ ಬಸ್ ಡಿಕ್ಕಿಯಾಗಿ ನಿಂತುಕೊಂಡಿದೆ. ಬಸ್ಸು ನಿಂತ ಜಾಗದ ಕೆಳೆಗಡೆಯೇ 150 ಅಡಿ ಆಳದ ಗುಂಡಿ ಇತ್ತು.ಅದೇ ಕಂದಕದಕ್ಕೆ ಬಸ್ ಉರುಳಿದ್ದರೆ ಅಪಾರ ಸಾವು ನೋವು ಸಂಭವಿಸುತ್ತಿತ್ತು.ಆದರೆ ಚಮತ್ಕಾರಿ ರೀತಿಯಲ್ಲಿ ತಡೆ ಗೋಡೆಗೆ ಹೋಗಿ ಬಸ್ಸು ತಗುಲಿ ಬಸ್ ನಿಂತಿದ್ದು ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ಪ್ರಯಾಣಿಕರು ಹಾರಿ ಜೀವ ಉಳಿಸಿಕೊಂಡಿದ್ದಾರೆ.ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರು ಸೇಫ್ ಆಗಿದ್ದು ಚಾಲಕ ನಿರ್ವಾಹಕ ಸೇರಿ 30 ಕ್ಕೂ ಹೆಚ್ಚು ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದಾರೆ.ಇನ್ನು ಬಸ್ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರ ಎದೆ ಝೆಲ್ಲೆನ್ನುವಂತಿದೆ.









