ಬೆಳಗಾವಿ:
ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ಎಂದು ಘೋಷಣೆ ಮಾಡುವ ವಿಚಾರಕ್ಕೆ ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆ ಗಲಾಟೆ ನಡೆದಿದೆ.ಸಭೆಯ ಬಾವಿಗೆ ಇಳಿದು ವಿಪಕ್ಷವು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.ಸರ್ಕಾರದ ನಾಮನಿರ್ದೇಶಿತ ಮತ್ತು ಪಕ್ಷೇತರ ಸದಸ್ಯರು ಸದನದ ಬಾವಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಗೊತ್ತುವಳಿ ಗೆ ಪಟ್ಟು ಹಿಡಿದಿದ್ದು ಕರ್ನಾಟಕ, ಕನ್ನಡಿಗರ ಅಸ್ಮೀತೆ ಪ್ರಶ್ನೆ ಎಂದು ಪ್ರತಿಭಟನೆ ನಡೆಸಲಾಗಿದೆ.ತಕ್ಷಣವೇ ಉಪ ಮೇಯರ್ ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ಮೂರು ತಿಂಗಳ ಹಿಂದೆಯೇ ಅಭಿಪ್ರಾಯಕ್ಕೆ ಕಳುಹಿಸಿದ್ದೇವೆ.ನಾವೂ ಸಹ ಕನ್ನಡಿಗರೇ ಸರ್ಕಾರದ ಸೂಚನೆ ಬರುವವರೆಗೂ ಕಾಯೋಣ.ಸರ್ಕಾರದ ಅಂಗಳದಲ್ಲಿ ಇರುವಾಗ ಪ್ರತಿಭಟನೆ ಸರಿಯಲ್ಲ ಎಂದು ಮನವೊಲಿಕೆಗೆ ಯತ್ನಿಸಿದರು.
ಉಪ ಮೇಯರ ಸಮಜಾಯಿಷಿಯನ್ನು ತಳ್ಳಿಹಾಕಿದ ಪ್ರತಿಭಟನಾನಿರತ ಸದಸ್ಯರು ನಮ್ಮೊಂದಿಗೆ ನೀವು ಬಂದು ಪ್ರತಿಭಟನೆ ಮಾಡಿ.ಸರ್ಕಾರದ ಮೇಲೆ ಹಾಕಿ ನುಣುಚಿಕೊಳ್ಳುವ ಯತ್ನ ಬೇಡ ಎಂದು ಸದಸ್ಯ ರಮೇಶ್ ಸೊಂಟಕ್ಕಿ ಆಕ್ಷೇಪ ವ್ಯಕ್ತಪಡಿಸಿದರು.ಇನ್ನು ಮೇಯರ್, ಉಪ ಮೇಯರ್ ಇಬ್ಬರೂ ಕನ್ನಡ ಮತದಾರರಿಂದ ಆಯ್ಕೆ ಬರ್ತೀರಿ ಇದಕ್ಕೆ ಮೇಯರ್ ನಾವು ವಿಷಯ ರೂಲಿಂಗ್ ಕೊಟ್ಟಿದ್ದೇವೆ.ನಾವೇನು ಕನ್ನಡ ವಿರೋಧಿಯಲ್ಲ ಸರ್ಕಾರದಿಂದ ಬರೋ ಸೂಚನೆಯಂತೆ ನಿರ್ಧಾರ ಮಾಡೋಣ. ಬೆಳಗಾವಿ ಅಭಿವೃದ್ಧಿಗೆ ನಾವು ಎಲ್ಲರೂ ಕೆಲಸ ಮಾಡೋಣ ಜಾತಿ, ಭಾಷೆ ಅಂತಾ ರಾಜಕೀಯ ಬೇಡ ಎಂದು ಮೇಯರ್ ಹೇಳಿದರು.
ಇದಕ್ಕೆ ಒಪ್ಪದ ಪ್ರತಿಭಟನಾ ನಿರತ ಸದಸ್ಯರು ಪ್ರತಿಭಟನೆ ಮುಂದುವರೆಸಿದರು.ನಂತರ ಸಾಮಾನ್ಯ ಸಭೆಯನ್ನು ಮೇಯರ್ ಮುಂದೂಡಿದರು.













