


ಬೆಳಗಾವಿ:
ಅನೈತಿಕ ಸಂಬಂಧದ ಹಿನ್ನೆಯಲ್ಲಿ ಕೊಲೆಯಾಗಿದ್ದ ವ್ಯಕ್ಯಿ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಅಧಿಕಾರಿಗಳು ಮೌಢ್ಯದ ಮೊರೆ ಹೋದ್ರಾ ಎನ್ನುವ ಅನುಮಾನಗಳು ಕಾಡುತ್ತಿವೆ.ಅನೈತಿಕ ಸಂಬಂಧಕ್ಕಾಗಿ ಪತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ
ಚಿಕ್ಕೋಡಿ ಎಸಿ ಎಸ್.ಎಸ್ ಸಂಪಗಾವಿ ನೇತೃತ್ವದಲ್ಲಿ ಹೂತ್ತಿದ ಶವ ಹೊರಕ್ಕೆ ತೆಗೆಯುವ ಕಾರ್ಯ ನಿನ್ನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದ್ದು
ಶವ ಹೊರ ತೆಗೆಯುವ ಮುನ್ನ ಕೋಳಿ ಬಲಿ ಕೊಡಲು ಪೊಲೀಸರು ಮುಂದಾಗಿದ್ದರು.
ಕೋಳಿ ಬಲಿಕೊಟ್ಟು ಬಳಿಕ ಶವ ಅಗೆಯಲು ಮುಂದಾಗಿದ್ದ ಪೊಲೀಸರು ಮಾಧ್ಯಮದವರು ವಿಡಿಯೋ ಮಾಡುತ್ತಿದ್ದಂತೆ ಪ್ಲಾನ್ ಚೇಂಜ್ ಮಾಡಿದ್ದಾರೆ.
ಮಾಧ್ಯಮದವರು ವಿಡಿಯೋ ಮಾಡುತ್ತಿದ್ದಂತೆ ಕೋಳಿ ವಾಪಸ್ ತೆಗೆದುಕೊಂಡು ವ್ಯಕ್ತಿ ಹೊರಟು ಹೋಗಿದ್ದಾನೆ.
ಪ್ರಾಣಿ ಬಲಿಕೊಟ್ಟು ಬಳಿಕ ಕಾರ್ಯಾಚರಣೆ ನಡೆಸಲು ಪೊಲೀಸರು ಹಾಗೂ ತಾಲೂಕಾಡಳಿತ ನಿರ್ಧಾರ ಮಾಡಿತ್ತು ಎನ್ನಲಾಗಿದೆ.
ಕಂಪ್ಯೂಟರ್ ಯುಗದಲ್ಲೂ ಮೂಢನಂಬಿಕೆಗೆ ಮೊರೆ ಹೋಗಿದ್ಯಾಕೆ ಎನ್ನುವುದಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಉತ್ತರಿಸಬೇಕಿದೆ.
ರಾಘು ಗಾವಡೆ(40) ಎಂಬಾತತನ್ನು ಆತನ ಪತ್ನಿ ಬಂಗಾರಿ ಎಂಬಾಕೆ ಆಕೆಯ ಪ್ರೀಯಕರ ರಾಮಾ ಜೊತೆಗೆ ಸೇರಿ ಕೊಲೆ ಮಾಡಿ ಅವರದ್ದೆ ಜಮೀನಲ್ಲಿ ಹೂತ್ತಿದಳು. ಶವ ಹೊರ ತೆಗೆದಯುವುದಕ್ಕೆ ಪೊಲೀಸರು ಶವದ ಮೇಲೆ ಕೋಳಿ ಬಲಿಗೆ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.ಸದ್ಯ ಈ ವಿಚಾರ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದೆ.










