ಕ್ರೈಂಜಿಲ್ಲೆಬೆಳಗಾವಿ

ಗ್ಯಾಸ್ ಸಿಲಿಂಡರ್ ಸ್ಪೋಟ ತಪ್ಪಿದ ಭಾರಿ ಅನಾಹುತ ಮುನವಳ್ಳಿಯಲ್ಲಿ ಘಟನೆ

ಬೆಳಗಾವಿ:

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಸಿಲಿಂಡರ್ ಸ್ಪೋಟವಾಗಿ ಬೇಕರಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.ಮುನವಳ್ಳಿ ಪಟ್ಟಣದ ಸಿಂಧೋಗಿ ಕೆಇಬಿ ಸರ್ಕಲ್ ಬಳಿ ಇದ್ದ ಬೇಕರಿಯಲ್ಲಿ ಘಟನೆ ನಡೆದಿದೆ. ಬೇಕರಿಯಲ್ಲಿದ್ದ ಸುಮಾರು 25 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿವೆ. ಹಾಸನ ಮೂಲದವರಾದ ವೀರೂಪಾಕ್ಷ ಎಂಬುವವರು ಕಳೆದ ಕೆಲ ವರ್ಷಗಳಿಂದ ಮುನವಳ್ಳಿಯಲ್ಲಿ ಬೇಕರಿ ನಡೆಸುತ್ತ ಬಂದಿದ್ದರು. ಬೇಕರಿಯಲ್ಲಿ ಇಂದು ಬೆಳಗ್ಗೆ ಕೆಲಸ ಮಾಡುವ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ ಎನ್ನಲಾಗಿದೆ. ಗ್ಯಾಸ್ ಲೀಕ್ ಆಗುತ್ತಿದ್ದಂತೆಯೇ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಅಪಾಯ ಘಟಿಸಿಲ್ಲ. ಘಟನೆಯಲ್ಲಿ ಬೇಕರಿ ಒಳಗಿನ ಪ್ರಿಡ್ಜ್ ಸೇರಿ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂಧಿ ಬೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಘಟನೆಯು ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸವದತ್ತಿ ಪೊಲೀಸರೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

TV24 News Desk
the authorTV24 News Desk

Leave a Reply