


ಬೆಳಗಾವಿ:
ರಾಕ್ಕಸಕೊಪ್ಪ ಜಲಾಶಯಕ್ಕೆ ಇಂದು ಬೆಳಗಾವಿಯ ಮೇಯರ್ ಹಾಗೂ ಉಪಮೇಯರ್ ಭೇಟಿ ನೀಡಿ ನೀರಿನ ಪ್ರಮಾಣ ವೀಕ್ಷಣೆ ಮಾಡಿದರು. ಮಹಾಪೌರರಾದ ಶ್ರೀಮತಿ ಪ್ರೀತಿ ಕಾಮಕರ, ಉಪ ಮಹಾಪೌರ ಹಣಮಂತ ಕೊoಗಾಲಿ,ಹಾಗೂ ಬೆಳಗಾವಿ ದಕ್ಷಿಣ ಶಾಸಕರಾದ ಅಭಯ್ ಪಾಟೀಲ್ ನೇತ್ರತ್ವದಲ್ಲಿ ಹಲವಾರು ನಗರಸೇವಕರು ಹಾಗೂ ಅಧಿಕಾರಿಗಳ ತಂಡ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ವೀಕ್ಷಣೆ ನಡೆಸಿದರು.ಅಲ್ಲದೇ ನೀರು ಸರಬರಾಜು ಯೋಜನೆ ಕುರಿತು ಗಂಭೀರ ಮಾತುಕತೆ ನಡೆಸಿದ ಮೇಯರ್ ಹಾಗೂ ಉಪಮೇಯರ್ ಸದ್ಯ ರಕ್ಕಸಕೊಪ್ಪ ಜಲಾಶಯದಿಂದ 20 MLD ಮತ್ತು ಹಿಡಕಲ್ ಜಲಾಶಯದಿಂದ 60 MLD ಮತ್ತು ಟ್ಯಾಂಕರ್ ಮತ್ತು ಬೋರ್ವೆಲ್ 24*27 ಪ್ರತಿ ದಿವಸ ಎರಡು ಗಂಟೆ ಈ ರೀತಿ ಒಟ್ಟು 100 MLD ಪ್ರತಿ ದಿನ ಪೂರೈಸಲು ಒಂದು ಯೋಜನೆ ಮುಖಾಂತರ ಬೆಳಗಾವಿಗೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.ಇದೇ ವೇಳೆ ಬೆಳಗಾವಿ ನಾಗರಿಕರಲ್ಲಿ ವಿನಂತಿಯನ್ನೂ ಮಾಡಿಕೊಂಡ ಮೇಯರ್ ಉಪಮೇಯರ್ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಜನರು ಮಿತವಾಗಿ ನೀರು ಬಳಸಲು ವಿನಂತಿಸಿಕೊಂಡದರು.








