


ಚಿಕ್ಕೋಡಿ:
ಮಲಗಿದ್ದಲ್ಲೇ ಪತ್ನಿಯನ್ನು ಮಾರಕಾಸ್ತ್ರಿಂದ ಕೊಚ್ಚಿ ಪತಿಯೇ ಕೊಲೆ ಮಾಡಿದ ಘಟನೆ ನಡೆದಿದೆ. ಘಟನೆ ಪತಿಗೆ ಪತ್ನಿಯ ಮೇಲಿದ್ದ ಸಂಶಯವೇ ಕಾರಣ ಎಂದು ತಿಳಿದು ಬಂದಿದ್ದು ಸಂಶಯದ ಭೂತಕ್ಕೆ ಮಹಿಳೆಯ ಕೊಲೆಯಾಗಿದ್ದರಿಂದ ಇಡೀಯ ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಹೊರ ವಲಯದಲ್ಲಿ ಮಹಿಳೆಯ ಭೀಕರ ಕೊಲೆ ನಡೆದಿದೆ.ಶೋಭಾ ಪರಗೂಂಡ ಸಾರವಾಡ (35) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದ್ದು ಮಲಗಿದಲ್ಲೇ ಮಾರಕಾಸ್ತ್ರಗಳಿಂದ ಗಂಡನೇ ಕೊಲೆಗೈದಿದ್ದಾನೆ. ತೀವ್ರವಾಗಿ ಗಾಯಗೊಂಡು ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರು ಮೂಲತ ಅಥಣಿ ತಾಲೂಕಿನ ಖವಟಗೋಪ್ಪ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.ಕಟಗೇರಿ ಔಜಿಕರ ಮಠದ ಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಮಾಡಿ ಮಹಿಳೆ ಜೀವನ ಸಾಗಿಸುತ್ತಿದ್ದಳು ಎನ್ನಲಾಗಿದೆ.
ಆರೋಪಿ ಪರಗೂಂಡ ಸಾರವಾಡ ನಿಂದ ಕರ್ತ್ಯ ನಡೆದಿದ್ದು ಪರಗೊಂಡ ಕುಡಿತ ಚಟ ಹಾಗೂ ಹೆಂಡತಿ ಮೇಲೆ ಸಂಶಯ ಪಟ್ಟು ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ.ಆರೋಪಿಯನ್ನು ಅಥಣಿ ಪೊಲೀಸರು ಬಂಧಸಿದ್ದು
ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು
ಮದುವೆಯಾಗಿ 15 ವರ್ಷ ನಂತರ ಹೆಂಡತಿ ಮೇಲೆ ಸಂಶಯ ಶುರುವಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








