ಕ್ರೈಂಬೆಳಗಾವಿ ನಗರ

ಬುದ್ದಿವಾದ ಹೇಳಲು ಬಂದ ಆಳಿಯ ತಂದ ಮಾವನ ಪ್ರಾಣಕ್ಕೆ ಕುತ್ತು!

ಬೆಳಗಾವಿ:

ಪತ್ನಿ ಹಾಗೂ ಅಳಿಯನ ಎದರುರೇ ಪತಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಡೆದಿದೆ. ಹೊನ್ನಿಹಾಳ‌ ಗ್ರಾಮದ ಮಲ್ಲಪ್ಪ ಕಟಬುಗೋಳ(35) ತನ್ನ ಕತ್ತು ತಾನೇ ಕಾಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿನ್ನೆ ಮನೆಯಲ್ಲಿದ್ದ ಅಕ್ಕಿಯನ್ನ ಮಾರಿ ಮಲ್ಲಪ್ಪ ಸಾರಾಯಿ ಕುಡಿದು ಮನೆಗೆ ಬಂದಿದ್ದ ಎನ್ನಲಾಗಿದೆ. ಅಕ್ಕಿ ಮಾರಿ ಸಾರಾಯಿ ಕುಡಿದು ಬಂದಿದ್ದೂ ಅಲ್ಲದೆ ಮನೆಯಲ್ಲಿದ್ದ ಪತ್ನಿ ರೇಖಾ ಜೊತೆಗೆ ಗಲಾಟೆ ಪ್ರಾರಂಭಿಸಿದ್ದಾನೆ. ಯಾವಾಗ ಮಲ್ಲಪ್ಪ ಕುಡಿದು ಗಲಾಟೆ ಮಾಡೋಕೆ ಶುರು ಮಾಡಿದನೋ ಆಗ ರೇಖಾ ತನ್ನ ಸಹೋದರನನ್ನ ಮನೆಗೆ ಕರೆಸಿದ್ದಾಳೆ.(ಮಾವ) ಮಲ್ಲಪ್ಪನಿಗೆ ಎರಡು ಬುದ್ದಿಮಾತು ಹೇಳಿ ಹೋಗು ಎಂದು ರೇಖಾ ತನ್ನ ಸಹೋದರನನ್ನ ಮನೆಗೆ ಕರೆಸಿದ್ದಾಳೆ. ಈ ವೇಳೆ ಮಾವ ಅಳಿಯನ ಮಧ್ಯೆ ವಾಗ್ವಾದ ಶುರುವಾಗಿ ರೇಖಾ ಸಹೋದರ ಮಾವ ಮಲ್ಲಪ್ಪನಿಗೆ ಕಟ್ಟಿಗೆಯಿಂದ ಹೊಡೆದಿದ್ದಾನೆ. ಹಲ್ಲೆ ಮಾಡುತ್ತಿದ್ದಂತೆ ಮನೆಯಲ್ಲಿದ್ದ ಕುಡಗೋಲು ತೆಗೆದುಕೊಂಡು ಕೈಲಿ ಹಿಡಿದು ಮಲ್ಲಪ್ಪ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ. ಈ ವೇಳೆ ರೇಖಾ ಸಹೋದರ ನೀನು ಸತ್ತರೆ ಅಕ್ಕ ಚನ್ನಾಗಿರುತ್ತಾಳೆ ಎಂದು ಅಳಿಯ ಮಲ್ಲಿಕಾರ್ಜುನ್ ಹೇಳಿದ್ದಾನೆ. ಮಲ್ಲಿಕಾರ್ಜುನ್ ಹೀಗೆ ಹೇಳುತ್ತಿದ್ದಂತೆ ಮಲ್ಲಪ್ಪ ಕ್ಷಣಾರ್ಧದಲ್ಲಿಯೇ ತನ್ನ ಕತ್ತು ಕಾಯ್ದುಕೊಂಡು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ. ಮಲ್ಲಪ್ಪ ಸಾಯುತ್ತಿದ್ದಂತೆ ಅಳಿಯ ಮಲ್ಲಿಕಾರ್ಜುನ ಅಲ್ಲಿಂದ ಪಾರಿಯಾಗಿದ್ದಾನೆ. ಸಧ್ಯ ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆಳಿಯ ಮಲ್ಲಿಕಾರ್ಜುನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಮೃತ ಮಲ್ಲಿಕಾರ್ಜುನ ಮೃತದೇಹವನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆಂದು ಕಳಿಸಲಾಗಿದ್ದು ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


TV24 News Desk
the authorTV24 News Desk

Leave a Reply