ಬೆಳಗಾವಿ

ಬೈಕ್ ಗಳ ಮಧ್ಯೆ ಡಿಕ್ಕಿ ಓರ್ವ ಮಹಿಳೆ ಸಾವು 

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ಸಮೀಪ 2 ಬೈಕ್ ಗಳ ಮಧ್ಯೆ ಡಿಕ್ಕಿ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ.
ಮೃತ ಮಹಿಳೆ 45 ವರ್ಷದ ನೀಲವ್ವ ಕಾಂಬಳೆ ಎಂದು ತಿಳಿದು ಬಂದಿದೆ.
ಕೊಟಬಾಗಿ ಗ್ರಾಮದ ನೀಲವ್ವ ಹಾಗೂ ಮಗ ರವಿ ಬೈಕ್ ನಲ್ಲಿ ಹುಕ್ಕೇರಿಯತ್ತ ಹೊರಟಿದ್ದರು. ಈ ವೇಳೆ ಇದೇ ಗ್ರಾಮದ ಬಸವರಾಜ ರಾಜಾಪೂರೆ ಎಂಬಾತನ ಬೈಕ್ ಹಾಗೂ ಇವರ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.ಪರಿಣಾಮ ಮಹಿಳೆಯ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ.  ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
TV24 News Desk
the authorTV24 News Desk

Leave a Reply