Uncategorized

ಬೆಳಗಾವಿಯಲ್ಲಿ ಜಗನ್ನಾಥ ಜೋಶಿ ಸ್ಮಾರಕ ಭವನ‌ ಉದ್ಘಾಟನೆ! ಗೃಹ ಸಚಿವರ ವಿರುದ್ದ ಖೋಟಾ ಗುಡುಗು!!

ಬೆಳಗಾವಿ:

ಬೆಳಗಾವಿಯ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಉದ್ಘಾಟನೆ ಕಾರ್ಯಕ್ರಮ ನ್ಯೂ ಗೂಡ್ಸ್ ಶೆಡ್ ರಸ್ತೆಯಲ್ಲಿ ಕಾರ್ಯಕ್ರಮ ನೆರವೇರಿತು‌.ಆರ್ ಎಸ್ ಎಸ್ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ರಾಜ್ಯದ ಬಹುತೇಕ ಬಿಜೆಪಿ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಯಂದ್ರ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದಾಗಿದ್ದು ಅದನ್ನು ಹೊರತು ಪಡಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಪಕ್ಷ ನಾಯಕ ಆರ್ ಅಶೋಕ, ಸಂಸದರಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ವಿಶ್ವೇಶ್ವರಯ್ಯ ‌ಹೆಗ್ಡೆ ಕಾಗೇರಿ, ಕೋಟಾ ಶ್ರೀನಿವಾಸ ಪೂಜಾರಿ, ರಮೇಶ ಜಿಗಜಿಣಗಿ ಭಾಗಿಯಾಗಿದ್ದರು.ಇನ್ನು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.ಅಲ್ಲದೇ ರಮೇಶ ಜಾರಕಿಹೊಳಿ, ಸಿಸಿ ಪಾಟೀಲ್, ಅರವಿಂದ ಬೆಲ್ಲದ, ಶಶಿಕಲಾ ಜೊಲ್ಲೆ, ಸಿ ಟಿ ರವಿ ಸೇರಿ ಅನೇಕರು ಭಾಗಿಯಾಗಿದ್ದರು.
ಇನ್ನು ಕಾರ್ಯಕ್ರಮಕ್ಕೂ ಮುನ್ನ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದರು.ಜಗತ್ತಿನ ಹಿಂದೂಗಳಿಗೆ ಅನ್ಯಾಯವಾದಾಗ ಧ್ವನಿ ಎತ್ತುವುದೇ ಆರ್‌ಎಸ್‌ಎಸ್ ಮಾತ್ರ ಹಿಂದೂಗಳನ್ನು ದುರ್ಬಲಗೊಳಿಸಲು ಈಗ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಮುಂದಾಗಿದ್ದಾರೆ.ಹಿಂದೂಗಳ ಬೆನ್ನಿಗೆ ನಿಂತಿರುವ ಸಂಘದ ಬಗ್ಗೆ ಮಾತಬಾಡಿ ಹಿಂದೂಗಳನ್ನು ಒಡೆಯುವ ಕುತಂತ್ರ ಇದಾಗಿದೆ ಎಂದರು.ಹಿಂದೂಗಳನ್ನು ಒಡೆಯಲು ಪ್ರಿಯಾಂಕ್ ಖರ್ಗೆ ಚಮತ್ಕಾರ್ ಮಾಡ್ತಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವವರ ರಕ್ಷಣೆ ನಡೆದಿದೆ. ಭಾರತ ಮಾತಾಕಿ ಜೈ ಎಂದವರನ್ನು ದುರ್ಬಲ ಗೊಳಿಸುವ ಹುನ್ನಾರ ಆಗುತ್ತಿದೆ.ಪ್ರಿಯಾಂಕ್ ಖರ್ಗೆಗೆ ಹಿಂದೂ ವಿರೋಧಿ ಸಂಘಟನೆಗಳ ಕುಮ್ಮಕ್ಕು ಇದೆ.ಹಿಂದೂತ್ವ ವಿರೋಧಿಸುವ ಎಲ್ಲರೂ ಈಗ ಆರ್‌ಎಸ್‌ಎಸ್ ಬಗ್ಗೆ ಮಾತನಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

TV24 News Desk
the authorTV24 News Desk

Leave a Reply