ಬೆಳಗಾವಿ:
ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ ಮುಗಿದಿದೆ.ಇನ್ನು ದಾಳಿ ಮುಕ್ತಾಯಗೊಂಡ ಬೆನ್ನಲ್ಲೇ ಬೆಂಗಳೂರಿನಿಂದ ಬೆಳಗಾವಿಗೆ ವೈ. ಮಂಜುನಾಥ ಆಗಮಿಸಿದ್ದಾರೆ.ಸರ್ಕಾರಿ ಕಾರಿನಲ್ಲೇ ತಮ್ಮ ನಿವಾಸಕ್ಕೆ ಅಬಕಾರಿ ಹೆಚ್ಚುವರಿ ಆಯುಕ್ತ ಮಂಜುನಾಥ ಆಗಮಿಸಿದ್ದು
ಬೆಳಗಾವಿಯ ಟಿವಿ ಸೆಂಟರ್ ನಲ್ಲಿರುವ ಮಂಜುನಾಥ ಮನೆಗೆ ಮಂಜುನಾಥ ಬಂದಿದ್ದಾರೆ.ಇಡಿ ಅಧಿಕಾರಿಗಳು ದಾಳಿ ಮುಗಿಸಿ ವಾಪಾಸ್ ತೆರಳುತ್ತಿದ್ದಂತೆ ಮನೆಗೆ ಆಗಮಿಸಿದ್ದು ನಿನ್ನೆ ಬೆಂಗಳೂರಿನ ನಿವಾಸದಲ್ಲಿದ್ದ ಮಂಜುನಾಥ ಸದ್ಯ ಕಾರ್ ಮೂಲಕ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದು ಕುಟುಂಬಸ್ಥರ ಜೊತೆಗೆ ಇಂದು ದಾಳಿಯ ಕುರಿತು ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಮತ್ತು ಬೆಳಗಾವಿಯ ಮನೆಯಿಂದ ಅಧಿಕಾರಿಗಳು ತೆಗೆದುಕೊಂಡು ಹೋಗಿರುವ ದಾಖಲೆಗಳ ಕುರಿತು ಅವಲಕೋಕನ ಮಾಡುವ ಸಾಧ್ಯತೆ ಇದೆ.












