Uncategorized

ಇಂಥಾ ಪಾವನ್ಯಾ ನಿಮ್ಮನ್ಯಾಗು ಇದ್ರ ಹುಷಾರಿರ್ರಿಪೋ!!

ಸಂಬಂಧಿಕರ ಮನೆಗೆ ಕನ್ನ ಹಾಕಿದ ಆಶ್ಫಾಕ್
ಕದ್ದ ಮಾಲ್ ಸಮೇತ ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸ್ ಸಿಬ್ಬಂಧಿ!!

ಬೆಳಗಾವಿ:

ಬೆಳಗಾವಿ ನಗರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಬೆಳಗಾವಿ ನಗರ ಪೊಲೀಸರು ಭೇದಿಸಿದ್ದು ಅಪಾರ ಪ್ರಮಾಣದಲ್ಲಿ ಕಳುವಾಗಿದ್ದ ಬಂಗಾರದ ಆಭರಣಗಳನ್ನು ವಶಪಡಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರದ ಅಮನ್ ನಗರ ಹಾಗೂ ನ್ಯೂ ಗಾಂಧಿ ನಗರದಲ್ಲಿ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಫಾಕ್ ಖಾಜಾಸಾಬ್ ಸಾಠಿ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಗಳ್ಳತನದ ಕುರಿತು ದಾಖಲಾಗಿದ್ದ ಪ್ರಕರಣವನ್ನು ಭೇದಿಸಿರುವ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಗಡ್ಡೇಕರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಈ ಪ್ರಕರಣದ ವಿಶೇಷವೇನು ಎಂದರೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಈ ಅಶ್ಫಾಕ್ ತಮ್ಮ ಬೀಗರ ಮನೆಯಲ್ಲಿದ್ದ ಸುಮಾರು 169 ಗ್ರಾಂ ಬಂಗಾರದ ಆಭವಣ ಒಟ್ಟು 25,35,000 ರೂ ಮೌಲ್ಯದ ಆಭರಣ ಕಳವು‌ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ. ಈ ಕುರಿತು ಸಂಬಂಧಿಕರು ದೂರು ಸಲ್ಲಿಸಿದ್ದರು. ದೂರನ್ನಾಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಮನೆಯಲ್ಲಿದ್ದ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಕಳ್ಳ ತಮ್ಮ ಬೀಗನೆ ಆಗಿರುವುದರಿಂದ ಸಂಬಂಧಿಕರೂ ಸಹ ಹೌಹಾರಿದ್ದಾರೆ. ಸದ್ಯ ಈ ಕುರಿತು ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply