ಬೆಳಗಾವಿ;
ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ
ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ ಸುದ್ದಿಗೋಷ್ಠಿ ನಡೆಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ದುಃಖದ ಘಟನೆ.ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ, ಮೂವರು ಸಾವನ್ನಪ್ಪಿದ್ದು, ಓರ್ವರ ಸ್ಥಿತಿ ಚಿಂತಾಜನಕವಾಗಿದೆ.ಅವರ ಮನೆಯವರಿಗೆ ಮೃತ ಸಂತೋಷ ಮೇಲೆ ಬಹಳ ಪ್ರೀತಿ ಇತ್ತು.ಆ ಪ್ರೀತಿ ಹೇಗಿತ್ತು ಎಂದರೆ ನಿನ್ನ ಜೊತೆಗೆ ನಾವು ಸಾಯುತ್ತೇವೆ ಅಂತಾ ಹೇಳಿ ಎಲ್ಲರೂ ಕೂಡಿಕೊಂಡು ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಸಧ್ಯ ಬದುಕುಳಿದಿರುವ ಸುನಂದಾ ಅವರ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ.ಆರೋಪಿಗಳಾದ ರಾಜೇಶ ಕುರತಡಕರ್, ಭಾಸ್ಕರ, ನಾನಾ ಶಿಂಧೆ ಅವರನ್ನು ಬಂಧಿಸಿದ್ದೇವೆ. ಡೆತ್ ನೋಟ್ ಆಧರಿಸಿ ಅವರ ಮನೆ ಮೇಲೆ ದಾಳಿ ಮಾಡಲಾಗಿದ್ದು,ಈ ವೇಳೆ
661 ಗ್ರಾಂ ಚಿನ್ನಾಭರಣ, 7.75 ಲಕ್ಷ ನಗದು ಸಿಕ್ಕಿದೆ.ಡೆತ್ ನೋಟ್ ನಲ್ಲಿ ಯಾರು ಸಾಲ ಮಾಡಿದ್ದಾರೊ ಅವರಿಗೆ ಇಷ್ಟು ಚಿತ್ರಹಿಂಸೆ ಯಾರೂ ಕೊಡಬಾರದು ಅಂತಾ ಉಲ್ಲೇಖಿಸಿದ್ದಾರೆ ಜೀವ ಬೆದರಿಕೆ, ಮಾನ ಹಾನಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ.
ಸಾಲ ತೆಗೆದುಕೊಳ್ಳುವಾಗ ಅಧಿಕೃತ ಸಂಸ್ಥೆಗಳಿಂದ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬಡ್ಡಿ, ಚಕ್ರಬಡ್ಡಿ ಹಾಕಿ ಶೋಷಣೆ ಮಾಡುತ್ತಾರೆ.ಇದನ್ನು ಸಹಿಸಲು ಸಾಧ್ಯವಿಲ್ಲ.ಆರೋಪಿ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಅಣ್ಣನ ಮನೆಗೆ ಬಂದು ರಾಜು ಕಿರುಕುಳ ಹೆಚ್ಚಾಗಿದೆ. ಹಾಗಾಗಿ, ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೇನೆ ಅಂತಾ ಹೇಳಿದ್ದ. ಹಾಗಾಗಿ, ಎಲ್ಲರೂ ಈ ರೀತಿ ಆತ್ಮಹತ್ಯೆ ಯತ್ನಿಸಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ ಮಾಹಿತಿ ನೀಡಿದ್ದಾರೆ.

