ಬೆಳಗಾವಿ:
ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ
ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಯೋಗ ದಿನಾಚರಣೆ ಆಚರಿಸಲಾಯ್ತು ಯೋಗ ದಿನಾಚರಣೆಯನ್ನು ಬೆಳಗಾವಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಆಶ್ರಯದಲ್ಲಿ ಆಚರಿಸಲಾಯ್ತು ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಡಿಸಿ ಮಹಮ್ಮದ್ ರೋಷನ್, ಕಮಿಷನರ್ ಭೂಷಣ ಬೋರಸೆ, ಜಿಪಂ ಸಿಇಓ ರಾಹುಲ್ ಶಿಂಧೆ, ಎಸ್ಪಿ ಕೆ.ರಾಮರಾಜನ್ ಸೇರಿ ಅಧಿಕಾರಿಗಳು,ವಿವಿಧ ಕಾಲೇಜು ವಿದ್ಯಾರ್ಥಿಗಳು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು. ಯೋಗ ದಿನಾಚರಣೆ ಉದ್ದೇಶಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಷಣ ಮಾಡಿ ಯೋಗ ಕೇವಲ ಆಸನವಲ್ಲ, ಕೆಲಸದಲ್ಲಿನ ನಿಪುಣತೆಯೇ ಯೋಗ ಎಂದರು.
ಭಕ್ತಿ ಯೋಗ, ಹಠ ಯೋಗ ಸೇರಿ ಹಲವು ಯೋಗ ಮಾರ್ಗಗಳಿವೆ
ಯೋಗ ವರ್ಕೌಟ್ ಅಲ್ಲ, ವರ್ಕ್ ಇನ್ ಎಂದು ಬಣ್ಣಿಸಿದ ಅವದು
ಆತ್ಮಶೋಧನೆಯೇ ಯೋಗದ ಉದ್ದೇಶ ಜೂನ್ 21ರಂದು ವೈಜ್ಞಾನಿಕವಾಗಿ ಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ.24 ಗಂಟೆಗಳ ಕಾಲ ಜಗತ್ತಿನಾದ್ಯಂತ ಯೋಗ ಆಚರಣೆ ಆಗುತ್ತೆ ಇದನ್ನೇ ಗೋಲ್ಡನ್ ರಿಂಗ್ ಎಂದು ಕರೆಯಲಾಗುತ್ತದೆ.ಜಗತ್ತಿನ ಎಲ್ಲ ದೇಶಗಳಲ್ಲಿ ದಿನದ 24ಗಂಟೆ ಯೋಗ ನಡೆಯುತ್ತೆ
ಯೋಗದಿಂದ ಆರೋಗ್ಯ ಸುಧಾರಣೆ, ಅನೇಕ ರೋಗಗಳಿಗೆ ಪರಿಹಾರ ಸಾಧ್ಯ ಎಂದು ಸಚಿವರು ಹೇಳಿದರು.ಯೋಗಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ ಭಾರತೀಯ ಯೋಗ ಪದ್ಧತಿಯೂ ಜಗತ್ತನ್ನು ಅತ್ಯಂತ ಸುಖದಿಂದ ನೋಡುವ ದೃಷ್ಟಿ ಹೊಂದಿದೆ.ಹೀಗಾಗಿ ನಾವೆಲ್ಲ ವಾರದಲ್ಲಿ ನಾಲ್ಕು ದಿನವಾದರೂ ಯೋಗ ಮಾಡಬೇಕು ಇದರಿಂದ ನಮ್ಮ ಮನಸ್ಸಿನಲ್ಲಿ ಸಾಕಷ್ಟು ಬದಲಾವಣೆ ಆಗುತ್ತೆ.ಕಳೆದ 17 ವರ್ಷಗಳಿಂದ ನಾನು ಯೋಗ ಮಾಡುತ್ತಿದ್ದೇನೆ ಎಂದು ಪ್ರಹ್ಲಾದ ಜೋಶಿ ಹೇಳಿದರು.ಯೋಗ ಜಗತ್ತನ್ನು ಸುಖ ಮತ್ತು ಸಮತೋಲನದ ದೃಷ್ಟಿಯಿಂದ ನೋಡುವ ಮಾರ್ಗ ಎಂದು ಸಚಿವ ಜೋಶಿ ಹೇಳಿದರು.














