ಬೆಳಗಾವಿ:
ಕೀಟಭಾಧಯ ಕಾಟಕ್ಕೆ ಸೋಯಾಬಿನ್ ಬೆಳೆ ಸಂಪೂರ್ಣ ನಾಶವಾದ ಹಿನ್ನೆಲೆ ರೈತರು ಪ್ರತಿಭಟನೆ ನಡೆಸಿದರು. ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸೋಯಾಬಿನ್ ಬೆಳೆದ ರೈತರು ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದರು. ಬೆಳಗಾವಿ ಜಿಲ್ಲೆಯ ಬೈಲಹೊಂಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೋಯಾಬಿನ್ ಬೆಳೆದ ನೂರಾರು ರೈತರು ಪ್ರತಿಭಟನೆ ಮಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬೈಲಹೊಂಗಲ ಸವದತ್ತಿ, ಕಿತ್ತೂರು, ಬೆಳಗಾವಿ ತಾಲೂಕಿನ ಹಲವೆಡೆ ಬೆಳೆ ಹಾನಿಯಾಗಿದ್ದು ರೈತರು ಕೀಟಬಾಧೆಯಿಂದ ಮೊಳಕಾಲುದ್ದ ಬೆಳೆದ ಬೆಳೆಯನ್ನು ನಾಶ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಿಗೆ ಐದರಿಂದ ಆರು ಬಾರಿ ಕೀಟನಾಶಕ ಸಿಂಪಡಣೆ ಮಾಡಿದರೂ ಸಹ ಕೀಟಬಾಧೆ ಹತೋಟಿಗೆ ಬಂದಿಲ್ಲ. ಅಲ್ಲದೆ ಕಳಪೆ ಬೀಜ ಹಾಗೂ ಕಳಪೆ ರಸಾಯನಿಕ ಗೊಬ್ಬರವೇ ಬೆಳೆ ಹಾನಿಗೆ ಕಾರಣವೆಂದು ರೈತರು ಆಕ್ರೋಶ ಹೊರಹಾಕಿದರು. ಒಂದು ಎಕರೆ ಪ್ರದೇಶದಲ್ಲಿ ಸೋಯಾಬಿನ್ ಬೆಳೆಯಲು ಸುಮಾರು ಮೂವತ್ತರಿಂದ ನಲವತ್ತು ಸಾವಿರ ಹಣ ಖರ್ಚಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಅಹವಾಲು ಕೇಳದ ಕೈಕಟ್ಟಿ ಕುಳಿತಿದ್ದಾರೆ ಎಂದು ರೈತರು ಆಕ್ರೋಶ ಹೊರ ಹಾಕಿದರು.ಕೈಯಲ್ಲಿ ತಾವು ಬೆಳೆದ ಸೋಯಾಬಿನ್ ಬೆಳೆಯನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದರು. ಅಲ್ಲದೆ ಕೃಷಿ ಇಕಾಖೆ ಅಧಿಕಾರಿಗಳ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.












