ಕ್ರೈಂಬೆಳಗಾವಿಬೆಳಗಾವಿ ನಗರ

ಕೂಗು ಹಾಕಿದ್ದಕ್ಕೆ ಚಾಕು ಇರಿದ ಭೂಪರು!ಬೆಳಗಾವಿಯ ಹುದಲಿಯಲ್ಲಿ ಘಟನೆ!

ಬೆಳಗಾವಿ:

ಮನೆ ಮುಂದೆ ನಿಂತು ಕೂಗು ಹಾಕಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ‌. ಬೆಳಗಾವಿ ತಾಲೂಕಿನ ಹುದಲಿಯಲ್ಲಿ ಘಟನೆ ನಡೆದಿದ್ದು ಘಟನೆಯಿಂದ ಹುದಲಿ ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ. ಮುತ್ತಣ್ಣ ಗುಡಬಲಿ ಎಂಬ 22 ವರ್ಷದ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ‌. ನಿನ್ನೆ ಮುತ್ತಣ್ಣ ಸ್ನೇಹಿತಬ ಬರ್ತಡೇ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ಆರೋಪಿಗಳ ಮನೆಯ ಮುಂದೆ ಕೂಗು ಹಾಕಿದ್ದ ಎನ್ನಲಾಗಿದೆ. ಈ ವೇಳೆ ಹತ್ತಕ್ಕೂ ಹೆಚ್ಚು ಜನ ಮುತ್ತಣನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮುತ್ತಣ್ಣನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಜಗಳ ರಾತ್ರಿಯೇ ಮುಗಿಯದೆ ಇಂದು ಮತ್ತೆ ಮನೆಯ ಬಳಿ ನಾಲ್ವರು ಬಂದು ಏಕಾಏಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಆರೋಪಿಗಳು ಮುತ್ತಣ್ಣನ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಇರಿದು ಹತ್ಯೆಗೆ ಯತ್ನಸಿದ್ದಾರೆ.ತೀವ್ರವಾಗಿ ಗಾಯಗೊಂಡ ಮುತ್ತಣ್ಣನನ್ನು ಸಧ್ಯ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಿತ್ತು. ಆದರೆ ಮುತ್ತಣ್ಣನ ಸ್ಥಿತಿ ಗಂಭೀರವಾಗಿದ್ದರಿಂದ ಬೀಮ್ಸ್ ಆಸ್ಪತ್ರೆಯಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಕು ಇರಿತಕ್ಕೊಳಗಾದ ಮುತ್ತಣ್ಣ
ಶಂಕಿತ ಆರೋಪಿಗಳು

TV24 News Desk
the authorTV24 News Desk

Leave a Reply

error: Content is protected !!