ಬೆಳಗಾವಿ:
ಭಾರತದ ಸಂವಿಧಾನದ ಪೀಠಿಕೆಯನ್ನು ಅಕ್ಕಿಕಾಳಿನಲ್ಲಿ ಬರೆಯುವುದರ ಮೂಲಕ ಗ್ರಾಂ ಪಂ ಸದಸ್ಯೆಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ್ ಗ್ರಾಮದ ತಿರುಮಲಾ ವಿಲಾಸ್ ಕಾಂಬಳೆಯವರು ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಪೀಠಿಕೆಯನ್ನು ಅಕ್ಕಿ ಕಾಳಿನಲ್ಲಿ ಬಿಡಿಸಿ ಸೈ ಎನ್ನಿಸಿಕೊಮಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ತಿರುಮತಿಯವರು ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವಕ ಯುವತಿರು ಕೆಟ್ಟ ಸಂದೇಶವಿರುವ ವಿಡಿಯೋಗಳಿಗೆ ಮಾರು ಹೋಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೇಯ ಸಂದೇಶವಿರುವ ವಿಡಿಯೋಗಳನ್ನು ಹಂಚಿಕೊಳ್ಳಲು ಅವರು ಮನವಿ ಮಾಡಿದ್ದಾರೆ. ಹೀಗಾಗಿ ಭಾರತರತ್ನ ಡಾ,ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪೀಠಿಕೆಯನ್ನು ಬರೆದು ಹಂಚಿಕೊಂಡಿರುವೆ ಎಂದಿದ್ದಾರೆ. ತಿರುಮಲಾ ಅವರ ಈ ಕಾರ್ಯವನ್ನು ಗ್ರಾಂ ಪಂ ಸದಸ್ಯರು ಹಾಗೂ ಗ್ರಾಮಸ್ಥರು ಮೆಚ್ಚಿದ್ದಾರೆ.



ಬೈಟ್ : ತಿರುಮಲಾ ಗ್ರಾಂ ಪಂ ಸದಸ್ಯೆ