ಜಿಲ್ಲೆಬೆಳಗಾವಿರಾಜಕೀಯ

ಕತ್ತಿ ಕುಟುಂಬದೊಂದಿಗೆ ಹೊಂದಾಣಿಕೆ ಪ್ರಶ್ನೆ ಇಲ್ಲ ಚುನಾವಣೆ ಒಂದೇ- ಬಾಲಚಂದ್ರ‌ ಜಾರಕಿಹೊಳಿ

ಬೆಳಗಾವಿ:

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡಿಸಿಸಿ ಬ್ಯಾಂಕ್‌ ಚುನಾವಣಾ ಕಾವು ರಂಗುಪಡೆದುಕೊಳ್ಳುತ್ತಿದೆ. ಮೊನ್ನೆಯಷ್ಟೆ ಹುಕ್ಕೇರಿಯಲ್ಲಿ ಬಿಜೆಪಿ ಪಕ್ಷದ ಚಿನ್ಹೆಯಡಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಮಾಜಿ ಸಂಸದ ರಮೇಶ ಕತ್ತಿ ಹಾಗೂ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಮಾಡಿದ್ದರು. ಹೊರಗಿನವರು ಬಂದು ಹುಕ್ಕೇರಿ ಕ್ಷೇತ್ರವನ್ನು ಆಳಲು ಬಿಡೋದಿಲ್ಲ ಎಂದು ರಮೇಶ ಕತ್ತಿ ಆರ್ಭಟಿಸಿದ್ದರು. ಇದರ ಬೆನ್ನಲ್ಲೆ ಇಂದು ಸಂಕೇಶ್ವರ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಭಾಗಿಯಾಗಿದ್ದರು.ಸಭೆಯ ನಂತರ ಜೊಲ್ಲೆ ಜಾರಕಿಹೊಳಿ ಜಂಟಿ ಸುದ್ಧಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಬಾಲಚಂದ್ರ‌ ಜಾರಕಿಹೊಳಿ ಮಾತನಾಡಿ
ವಿದ್ಯುತ್ ಸಹಕಾರಿ ಸಂಘದಲ್ಲೂ ಪ್ಯಾನಲ್ ಮಾಡುತ್ತೆವೆ ದಿ# ಅಪ್ಪಣಗೌಡ ಪಾಟೀಲ್ ಅವರ ಹೆಸರಿನ ಮೇಲೆ ಪ್ಯಾನಲ್ ಮಾಡುತ್ತೆವೆ.ಯಮಕನಮರಡಿ ಹುಕ್ಕೇರಿ ಸೇರಿ ಪ್ಯಾನಲ್ ಮಾಡುತ್ತೆವೆ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ಮಾಡ್ತಿವಿ ಎಂದು ಜಾರಕಿಹೊಳಿ ಹೇಳಿದರು.
ಇನ್ನು 9-6 ಹೊಂದಾಣಿಕೆ ಮಾಡಿಕೊಳ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಹೊಂದಾಣಿಕೆ ಆಗೋದಿಲ್ಲ ಆ ಸ್ಟೇಜ್ ಮುಗಿದು ಹೋಗಿದೆ ಚುನಾವಣೆ ಆಗಲಿ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸಹಕಾರ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೇಸ್ ಎಲ್ಲಾ ಪಕ್ಷದವರು ಬರ್ತಾರೆ ಭಿನ್ನಾಪ್ರಾಯ ಇರೋದು ನಿಜ ಆದರೆ ಪಾರ್ಟಿ ‌ವಿಚಾರ ಬಂದರೆ ನಾವು ಒಂದೇ ಇರ್ತಿವಿ ಎಂದು ಬಾಲಚಂದ್ರ ಜಾರಕಿಹೊಳಿ‌ ಹೇಳಿದರು. ಮೊನ್ನೆ ರಮೇಶ್ ಕತ್ತಿಯವರೂ ಬಿಜೆಪಿ ಕಾರ್ಯಕರ್ತರ ಸಭೆ ಮಾಡಿದರು.
ಇಂದು ನೀವೂ ಸಹ ಬಿಜೆಪಿ ಪಕ್ಷದ ‌ಕಾರ್ಯಕರ್ತರ ಸಭೆ ಮಾಡ್ತಿದ್ದರಿ ಎಂಬ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಡಿಸಿಸಿ ಬ್ಯಾಂಕ್ ಇತಿಹಾಸ ತೆಗೆದು ನೋಡಿ.
ಸಹಕಾರಿ ಚುನಾವಣೆಯಲ್ಲಿ ಪಕ್ಷ ಬರೋದಿಲ್ಲ‌ ಕೋ- ಆಪರೇಟಿವ್ ಚುನಾವಣೆ ಅಂದರೆ ಭಿನ್ನಾಭಿಪ್ರಾಯ ಇದ್ದೆ ಇರುತ್ತೆ ಎಂದರು ಇನ್ನು ಸಭೆಯಲ್ಲಿ ಕಾಂಗ್ರೇಸ್ ಪಕ್ಷದ ನಾಯಕರನ್ನು ಹಾಡಿ ಹೊಗಳಿದ್ದು ಬಿಜೆಪಿ ಅನ್ನೋದು ಸಿಂಬಾಲ್ ಅಷ್ಟೇನಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ ಮೂವತ್ತು ವರ್ಷಗಳ ಇತಿಹಾಸ ತೆಗೆದು ನೋಡಿ ಸಹಕಾರ ಚುನಾವಣೆಯಲ್ಲಿ ಎಲ್ಲರೂ ಕೂಡಿಯೇ ಮಾಡುತ್ತಾರೆ ಎಂದಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಹುಕ್ಕೇರಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಕಳೆದ 26 ವರ್ಷಗಳಿಂದ ಆಗಿಲ್ಲ ರಿಸಲ್ಟ್ ಏನೇ ಆಗಲಿ ಚುನಾವಣೆ ಮಾಡ್ತಿವಿ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಹೀರಾ ಶುಗರ್ಸ್ ಡೈರೆಕ್ಟರ್ ಮರಳಿ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು ಆ ಕಾರ್ಖಾನೆಗೆ 25 ಕೋಟಿ ಲೋನ್ ಕೊಡಲು ಯಾರೂ ಮುಂದೆ ಬಂದಿರಲಿಲ್ಲ ಆದರೂ 100 ಕೋಟಿ ಅಣ್ಣಾಸಾಹೇಬ್ ಜೊಲ್ಲೆ ಹೂಡಿಕೆ ಮಾಡಿದರು ಇನ್ನೂ 200 ಕೋಟಿ ಹೂಡಿಕೆ ಮಾಡಲು ಮುಂದಾಗಿದ್ದರು ಆದರೆ ಡೈರೆಕ್ಟರ್ ಗಳಿಗೆ ಭಿನ್ನಾಭಿಪ್ರಾಯ ಬಂತೋ ರಾಜಕೀಯವಾಗಿ ಎನು ಹೇಳಿದರೋ ಗೊತ್ತಿಲ್ಲ ಅವರು ಹೋಗಿದ್ದಾರೆ ಡಿಸಿಸಿ ಬ್ಯಾಂಕ್ ಪ್ಯಾನಲ್‌ನಲ್ಲಿ ಕೋರೆ ರಮೇಶ್ ಜಾರಕಿಹೊಳಿ,ಸತೀಶ್,ಸವದಿ, ಜೊಲ್ಲೆ ಎಲ್ಲರೂ ಇರ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ.
ಶಾಸಕರು ಅವರು ನಿಲ್ಲಬೇಕು ಮಿನಿಸ್ಟರ್ ಮಕ್ಕಳು ಅವರು ನಿಲ್ಲಬೇಕು ಅಂತ ಓಡಾಡ್ತಿದ್ದಾರೆ.
ಹುಕ್ಕೇರಿಯಿಂದ ಅಭ್ಯರ್ಥಿಯನ್ನು ಹುಡುಕುತ್ತೆವೆ ಸಪ್ಟೆಂಬರ್ ಅಂತಿಮ ವೇಳೆ ಅಭ್ಯರ್ಥಿಗಳು ಯಾರು ಅಂತ ಗೊತ್ತಾಗುತ್ತೆ ಡಿಕೆಶಿಯವರು ಬೆಳಗಾವಿ ಕುರಿತು ತಲೆ ಕಡೆಸಿಕೊಳ್ಳಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಿಮ್ಮ ವಿರೋಧಿ ಪೆನಲ್ ನಲ್ಲಿ ಯಾರು ಇರ್ತಾರೆ ಎಂಬ ಪ್ರಶ್ನೆ ಮಾಡಿದ ಮಾಧ್ಯಮಗಳಿಗೆ
ರಮೇಶ ಕತ್ತಿಯವರಂತೂ ಅವರಂತೂ ಪ್ಯಾನಲ್ ಮಾಡಲುಬಹುದು.
ನಾವಂತೂ ಅವರೊಂದಿಗೆ ಇಲ್ಲ.
ಸವದಿಯವರು ನಮ್ಮೊಂದಿಗೆ ಇದ್ದಾರೆ ಅವರು ನಮ್ಮ ಜೊತೆಗೆ ಬರ್ತಾರೆ ಇದೇ 5 ರಂದು ರಾಯಭಾಗದಲ್ಲಿ ಸಭೆ ಮಾಡ್ತಿವಿ ಅಲ್ಲಿ ಸವದಿ ಬರ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ರಾಹುಲ್ ಜಾರಕಿಹೊಳಿ ಹೆಸರು ಓಡ್ತಿದೆ.
ರಾಹುಲ್ ಸ್ಪರ್ಧೆಯ ಕುರಿತು ಸತೀಶ್ ನಿರ್ಣಯ ಮಾಡ್ತಾರೆ
ನಾವಾಗಲಿ ನಮ್ಮ ಕುಟುಂಬದವರಾಗಲಿ ಯಾರೂ ಸಹ ಚುನಾವಣೆಗೆ ನಿಲ್ಲೋದಿಲ್ಲ.
ಪ್ರಾಮಾಣಿಕವಾಗಿ ಚುಣಾವಣೆ ಮಾಡ್ತಿವಿ ರಾಜಕಾರಣದಲ್ಲಿ ಎನು ಬೇಕಾದರೂ ಆಗಬಹುದು ಎಂದು ಬಾಲಚಂದ್ರ ಜಾರಕಿಹೊಳಿ‌ ಹೇಳಿದರು ಇನ್ನು 1600 ಮತಗಳನ್ನು ಮಾತ್ರ ಇಟ್ಟುಕೊಂಡ ವಿಚಾರಕ್ಕೆ ಹಾಗಾದರೆ ಅದು‌ ಈಜಿ ಎಲೆಕ್ಷನ್ ಆಗುತ್ತೆ ಹಾಗಾದರೆ ನಾವು ಸರ್ಕಾರ ಹಾಗೂ ಹೈಕೋರ್ಟ್ ಹೋಗಿ ಎಲ್ಲರಿಗೂ ಸಹ ಮತದಾನದ ಹಕ್ಕು ತರುತ್ತೆವೆ.
ಶಾಸಕರು ನಾವೇ ನಿಲ್ತಿವಿ ಅಂದರೆ ನಾವು ಎನೂ ಮಾಡಲು ಆಗಲ್ಲ.
ಸೆಕೆಂಡ್ ಲೈನ್ ಲೀಡರ್ಸ್ಗಳನ್ನು ಬೆಳೆಸೋದು ನಮ್ಮ ವಿಚಾರದಲ್ಲಿದೆ
ಗೆಲ್ಲಿಸೋದು ಬಿಡೋದು ಜನರ ಕೈಯಲ್ಲಿದೆ ಎಂದು ಬಾಲಚಂದ್ರ ಜಾರಕಿಹೊಳಿ‌ ತಿಳಿಸಿದರು.

TV24 News Desk
the authorTV24 News Desk

Leave a Reply