ಜಿಲ್ಲೆಬೆಳಗಾವಿ

ಒಳಗೆ ಸೇರಿದರೆ ಗುಂಡು ಮಹಿಳೆಯಾಗುವಳು ಗಂಡು!

ಬೆಳಗಾವಿ:

ಕಂಠಪೂರ್ತಿ ಎಣ್ಣೆ ಹೊಡೆದು ನಮ್ಮ ಗಂಡ್ ಹೈಕ್ಳೂ ರಸ್ತೆ ಪಕ್ಕಾನೋ ಅಥವಾ ಮೋರಿ ಪಕ್ಕಾನೋ ಮಲಗೋದು ಕಾಮನ್ ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತಾಂವಶಿ ಗ್ರಾಮದ ಹೊರವಲಯದಲ್ಲಿ ಇದಕ್ಕೆ ತದ್ವಿರುದ್ಧ ಘಟನೆ ನಡೆದಿದ್ದು ಮಹಿಳೆಯರಿಬ್ಬರು ಫುಲ್ ಟೈಟಾಗಿ ರಸ್ತೆಗೆ ಅಡ್ಡಲಾಗಿ ಮಲಗಿದ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಮಹಿಳೆಯರು ತಮ್ಮ ಕುಟುಂಬ ಸಮೇತ ಕರ್ನಾಟಕದ ಗಡಿಗೆ ಬಂದು ಇಲ್ಲಿಯೇ ಕುಟುಂಬ ಸಮೇತ ನೆಲೆಸುತ್ತಾರೆ ಬಯಲು ಪ್ರದೇಶದಲ್ಲಿ ಸಿಗುವ ಒಣ ಕಟ್ಟಿಗೆಗಳನ್ನು ತಂದು ಸುಟ್ಟು ಇದ್ದಲು ಮಾಡೋದು ಇವರ ಕಾಯಕ. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಾಗಿದ್ದು ಕರ್ನಾಟಕ ಸರ್ಕಾರದಿಂದ ಒದಗಿಸಬೇಕಾದ ಸವಲತ್ತುಗಳನ್ನು ಅಧಿಕಾರಿಗಳು ಒದಗಿಸಿದರೂ ಸಹ ಹೀಗೆ ಮಧ್ಯ ಸೇವನೆ ಮಾಡಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಇಬ್ಬರೂ ಸಹ ಆಗಾಗಾ ರಂಪಾಟಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ಜನ ಆರೋಪಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಇವರಿಗೆ ಪೌಷ್ಠಿಕ ಆಹಾರ ಹಾಗೂ ಆರೋಗ್ಯ ಸೇವೆ ಒದಗಿಸಿದರೂ ಸಹ ಮಹಿಳೆಯರು ಹೀಗೆ ವರ್ತಿಸುತ್ತಿರುವುದಕ್ಕೆ ಸ್ಥಳೀಯರೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ತಾಂವಶಿ ಬಳಿ ರಸ್ತೆಯ ಮೇಲೆ ಮಲಗಿದ್ದ ಮಹಿಳೆಯರನ್ನು ಪಕ್ಕಕ್ಕೆ ಹಾಕ್ತಿರೋ ಸ್ಥಳೀಯರು
TV24 News Desk
the authorTV24 News Desk

Leave a Reply