



ಬೆಳಗಾವಿ:
ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲಿ ಸಿಕ್ಕ ನವವಿವಾಹಿತೆಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಪತ್ನಿಯನ್ನು ನೇಣು ಹಾಕಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ನಾ ಗಂಡ ಎನ್ನುವ ಅನುಮಾನ ಶುರುವಾಗಿದೆ. ಗೃಹಿಣಿಯ ಮನೆಯವರು ಮಗಳನ್ನು ಆಕೆಯ ಪತಿಯೇ ಕೊಂದು ಆತ್ಮಹತ್ಯೆಯ ಕಥೆ ಕಟ್ಟಿದ್ದಾನೆ ಎಂದು ಬೆಂಗಳೂರಿನ ಕೆ ಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಲ್ಲದೆ ನ್ಯಾಯಕ್ಕಾಗಿ ಬೆಳಗಾವಿಯ ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ.ಸ್ವಾತಿ ಶ್ರೀಧರ್ ಸನದಿ(28) ಕಳೆದ ಜುಲೈ 12 ರಂದು ಬೆಂಗಳೂರಿನ ಕೆಆರ್ ಪುರಂ ನ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸ್ವತಹ ಆಕೆಯ ಗಂಡ ಶ್ರೀಧರ್ ತನ್ನ ಮಾವ ಅನಂತಶಂಕರ್ ಅವರಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕರೆ ಮಾಡಿ ತಳಿಸಿದ್ದ. ಬೆಳಗಾವಿಯ ಮಚ್ಚೆ ನಿವಾಸಿ ಶ್ರೀಧರ್ ಹಾಗೂ ಮಚ್ಚೆ ನಿವಾಸಿ ಸ್ವಾತಿಗೆ ಕಳೆದ 18 ಹಿಂದೆಯಷ್ಟೆ ಮದುವೆಯಾಗಿತ್ತು. ಮೊದ ಮೊದಲು ಚನ್ನಾಗಿಯೇ ಇತ್ತು.ಆದರೆ ಬರ ಬರುತ್ತ ಶ್ರೀಧರ್ ಹಾಗೂ ಆತನ ಅಕ್ಕ ಹಾಗೂ ಅಮ್ಮನ ವರಸೆ ಬದಲಾಗಿತ್ತು. ಸ್ವಾತಿಗೆ ನೀನು ನೋಡಲು ಸುಂದರವಾಗಿಲ್ಲ, ನಿನಗೆ ಎನೂ ಮಾಡಲು ಬರುವುದಿಲ್ಲ ಎಂದು ಮಾನಸಿಕವಾಗಿ ಹಿಂಸೆ ನೀಡಿದ ಆರೋಪ ಸಧ್ಯ ಶ್ರೀಧರ್ ಹಾಗೂ ಅತನ ಕುಟುಂಬಸ್ಥರ ಮೇಲೆ ಮೃತ ಸ್ವಾತಿಯ ತಂದೆ ಅನಂತಶಂಕರ್ ಹಾಗೂ ಕುಟುಂಬಸ್ಥರು ಮಾಡುತ್ತಿದ್ದಾರೆ.ಜುಲೈ 12 2025 ರಂದು ಅನುಮಾನಾಸ್ಪದ ರೀತಿಯಲ್ಲಿ ಸ್ವಾತಿಯ ಶವ ಕಂಡ ಸ್ವಾತಿಯ ಕುಟುಂಬಸ್ಥರಿಗೆ ಆಕೆಯ ಗಂಡನ ಮನೆಯವರೇ ಎನೋ ಮಾಡಿ ಕೊಲೆ ಮಾಡಿ ಆತ್ಮಹತ್ಯೆಯ ಕಥೆ ಕಟ್ಟಿದ್ದಾರೆ ಎನ್ನುವ ಅನುಮಾನ ಕಾಡತೊಡಗಿದ್ದವು. ಹೀಗಾಗಿ ಸ್ವಾತಿಯ ಮೃತದೇಹವನ್ನು ಬೆಂಗಳೂರಿನಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಬೆಳಗಾವಿಗೆ ತಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು.ಇನ್ನು ಅಂತ್ಯ ಸಂಸ್ಕಾರದಲ್ಲೂ ಸಹ ಗಂಡ ಶ್ರೀಧರ್ ಆಗಲಿ ಆತನ ಅಮ್ಮನಾಗಲಿ ಆತನ ಸಹೋದರಿಯಾಗಲಿ ಬಾರದಿರುವುದು ಸಹ ಅನಂತಶಂಕರ್ ಕುಟುಂಬಸ್ಥರ ಅನುಮಾನಕ್ಕೆ ಎಡೆ ಮಾಡಿದೆ. ಹೀಗಾಗಿ ಕೆ ಆರ್ ಪುರಂ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣದಡಿ ಪ್ರಕರಣ ದಾಖಲಿಸಿರೋ ಸ್ವಾತಿ ಕುಟುಂಬಸ್ಥರು ಇತ್ತ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆಯವರ ಮೊರೆ ಹೋಗಿದ್ದಾರೆ. ಸ್ವಾತಿ ಕುಟುಂಬಸ್ಥರ ಅಳಲು ಆಲಿಸಿದ ನಗರ ಪೊಲೀಸ್ ಆಯುಕ್ತ ಬೋರಸೆ ತನಿಖೆ ನಡೆಸಿ ಮಗಳ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಅದೇನೆ ಇರಲಿ ಮದುವೆಯಾಗಿ ಸುಂದರ ಬದುಕಿನ ಕನಸು ಕಂಡ ಸ್ವಾತಿ ಇಷ್ಟು ಬೇಗ ಇಹಲೋಕ ತ್ಯಜಿಸಿದ್ದು ದುರಂತವೇ ಸರಿ