ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಡಕೋಳ ಸಮೀಪದ ಬಾಳೆಕುಂದ್ರಿ ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ನಡೆದಿದೆ.
ತೋರಣಕಟ್ಟೆ ಗ್ರಾಮದ ಪ್ರಕಾಶ್ ಬಡಕನೂರ ಹಾಗೂ ವಿಟ್ಟಲ ಕಟ್ಮಳ್ಳಿ , ಕಬ್ಬು ಕಟಾವ್ ಮಾಡಿ ಮರಳಿ ಮನೆಗೆ ಹೋಗುವಾಗ ಬಾಳೆಕುಂದ್ರಿ ಕಾಲುವೆಯಲ್ಲಿ ಈಜುಲು ಹೋಗಿದ್ದಾರೆ. ಈ ವೇಳೆ ಒಬ್ಬ ಯುವಕನಿಗೆ ಈಜಲು ಬಾರದೆ ಇನ್ನೊಬ್ಬ ಯುವಕನಿಗೆ ಹಿಡಿದುಕೊಂಡಿದ್ದಾನೆ. ಈ ವೇಳೆ ನೀರಿನಿಂದ ಹೊರಗೆ ಬರಲಾಗದೆ ಇಬ್ಬರೂ ಯುವಕರು ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ಕಟಕೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









