

ಬೆಳಗಾವಿ:
ಶಕ್ತಿ ಯೋಜನೆಯ ಎಫೆಕ್ಟ್ ವಿದ್ಯಾರ್ಥಿಗಳ ಮೇಲೆ ಬೀಳ್ತಿದೆ. ಶಾಲಾಗೆ ಹೋಗಲು ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರಿನಲ್ಲಿ ಮಕ್ಕಳಿಗೆ ಬಸ್ಸಿನಲ್ಲಿ ಕೂರಲಲ್ಲ ನಿಲ್ಲಲೂ ಸಹ ಜಾಗವಿಲ್ಲದೆ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಸ್ಸಿನಿಂದ ಕೆಳಗಿಳಿದ ಮಕ್ಕಳು ಬಸ್ಸಿನ ಮುಂದೆಯೇ ಕುಳಿತು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ. ಗೋಕಾಕನಿಂದ ಬೈಲಹೊಂಗಲಕ್ಕೆ ಶಿವಾಪುರ ಮಾರ್ಗವಾಗಿ ಬರುವ ಬಸ್ಸಿಗೆ ಮಳಗಲಿ, ತಡಸಲೂರು, ಚಿಕ್ಕಬುದ್ನೂರು ಸೇರಿದಂತೆ ವಿವಿಧ ಗ್ರಾಮದ ಮಕ್ಕಳು ಹತ್ತುತ್ತಾರೆ. ಆದರೆ ಶಕ್ತಿ ಯೋಜನೆಯ ಎಫೆಕ್ಟ್ ನಿಂದ ಮಕ್ಕಳಿಗೆ ಬಸ್ಸಿನಲ್ಲಿ ನಿಲ್ಲಲೂ ಸಹ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಮಕ್ಕಳು ಶಾಲೆಗೆ ಸರಿಯಾಗಿ ತಲುಪದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಮಗೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಿಕೊಡಿ ಎಂದು ವಿದ್ಯಾರ್ಥಿಗಳು ಬಸ್ಸಿನ ಮುಂದೆ ಕುಳಿತು ಪಟ್ಟು ಹಿಡಿದಿದ್ದಾರೆ. ಕೂಡಲೇ ಸ್ಥಳದಲ್ಲಿಯೇ ಇದ್ದ ನಿರ್ಹಾಹಕ ಬಸ್ ಡಿಪೋಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದಾಗ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.