ಮಾನವೀಯತೆ ಮೆರೆದ ಮೃಣಾಲ್ ಹೆಬ್ಬಾಳಕರ್
ಬೆಳಗಾವಿ: ಬೆಳಗಾವಿಯ ಮುತ್ನಾಳ ಬಳಿ ಪಾರ್ಚೂನರ್ ವಾಹನ ಅಪಘಾತವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಆಂಬುಲೇನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿ ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಮಾನವೀಯತೆ ಮರೆದಿದ್ದಾರೆ. ಬೆಳಗಾವಿ ತಾಲೂಕಿನ ಮುತ್ನಾಳ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಾರ್ಚೂನರ್ ಅಪಘಾತವಾಗಿ ಸ್ಥಳದಲ್ಲಿಯೇ ಪಲ್ಟಿಯಾಗಿತ್ತು.ಅದೇ ಮಾರ್ಗವಾಗಿವಾಗಿ ಕಾರ್ಯ ನಿಮಿತ್ತ ತೆರಳುತ್ತಿದ್ದ ಮೃಣಾಲ್ ಹೆಬ್ಬಾಳಕರ್ ಅವರು ಆಂಬುಲೇನ್ಸ್ ತರಿಸಿ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಗೌಸ್ ಜಾಲಿಕೊಪ್ಪ, ಸುರೇಶ್ ಇಟಗಿ, ನಿಂಗಪ್ಪ ತಳವಾರ್ ಸೇರಿದಂತೆ ಮತ್ತಿತರರು ಇದ್ದರು.




