Uncategorized

ಪಟಾಕಿ ಕಿಡಿ ಸಿಡಿದು ಲಕ್ಷಾಂತರ ಮೌಲ್ಯದ  ಪೀಠೋಪಕರಣ ಸಾಮಗ್ರಿ ಬೆಂಕಿಗಾಹುತಿ

ಕಿತ್ತೂರು: ಪಟಾಕಿ ಕಿಡಿ ಸಿಡಿದು ಲಕ್ಷಾಂತರ ಮೌಲ್ಯದ ಸಾಮಗ್ರಿಗಳನ್ನು ಸುಟ್ಟು ಕುಶನ್ ಅಂಗಡಿಯನ್ನು ಅಂದಾಜು 3 ಲಕ್ಷ ಮೌಲ್ಯದ ಸಿದ್ಧಗೊಂಡಿದ್ದ ಕುಶನ್ , ಪೀಠೋಪಕರಣ ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.

ಪಟ್ಟಣದ ಶಬ್ಬೀರ ಎಂಬವರಿಗೆ ಸೇರಿದ ಕುಶನ್ ಅಂಗಡಿ ಇದು . ಶಬ್ಬೀರ ಅವರ ಪಕ್ಕದ ಅಂಗಡಿಯ ಮಾಲೀಕರು ಲಕ್ಷ್ಮೀ ಪೂಜೆ ನಡೆಸಿದ್ದರು .ಬಳಿಕ ಪಾಟಕಿ ಸಿಡಿಸಲು ಮುಂದಾದಾಗ ಅದರ ಕಿಡಿ ಪಕ್ಕದ ಕುಶನ್ ಅಂಗಡಿಗೆ ಬಿದ್ದಿದೆ . ಬೆಂಕಿ ನಂದಿಸಲು ಹೋದ ಶಬ್ಬೀರ ಅವರ ಕೈ , ಕಾಲು ಇತರ ದೇಹದ ಭಾಗಗಳಿಗೆ ಗಾಯವಾಗಿದ್ದು ,ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ . ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡು , ಬೆಂಕಿ ನಂದಿಸಲು ಹರಸಾಹಸಪಟ್ಟರು . ಶಬ್ಬೀರ ಕುಟುಂಬ ಕೆಳ ಮಹಡಿಯಲ್ಲಿ ವಾಸವಿದ್ದು , ಮೇಲ್ಮಹಡಿಯಲ್ಲಿ ಕುಶನ್ ಮಳಿಗೆ ಇದೆ . ಅದೃಷ್ಟವಶಾತ್ ಬೆಂಕಿ ಕೆಳ ಮಹಡಿಗೆ ಹರಡಿಲ್ಲ ಮತ್ತು ಯಾವುದೇ ಜೀವಾಪಾಯ ಸಂಭವಿಸಿಲ್ಲ .

 

TV24 News Desk
the authorTV24 News Desk

Leave a Reply