ಬೆಳಗಾವಿ

ಧಾರಾಕಾರ ಮಳೆಗೆ ಕುಂದಾನಗರಿಯ ಜನ ಹೈರಾಣ!

ಬೆಳಗಾವಿ:

ಬೆಳನಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಂದಾನಗರಿಯ ಜನ ಹೈರಾಣಾಗಿ ಹೋಗಿದ್ದಾರೆ. ಬೆಳಗಾವಿಯ ಚನ್ನಮ್ಮ‌ವೃತ್ತದ ಬಳಿ ಇರುವ ಬೀಮ್ಸ್ ಆಸ್ಪತ್ರೆಯ ಆವರಣದ ಬಳಿ ಇರುವ ಆಟೋ ನಿಲ್ದಾಣ ಸಂಪೂರ್ಣ ಜಲಮಯವಾಗಿದ್ದು ಹತ್ತಾರು ಆಟೋಗಳು ನೀರಲ್ಲಿಯೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.‌ಧಾರಾಕಾರ ಮಳೆಯ ಪರಿಣಾಮ ಒಳಚರಂಗಡಿಗಳು ತುಂಬಿ ಮಳೆಯ ನೀರು ರಸ್ತೆಗೆ ಬರುತ್ತಿದೆ. ಅದರಲ್ಲೂ ಬೀಮ್ಸ್ ಎದುರಿಗಿನ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರೂ ಸೇರಿ ಪ್ರಯಾಣಿಕರೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರಸ್ತೆಯ ಮೇಲೆ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾಹರರೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ನಿರಂತರ ಮಳೆಯಿಂದ ಕುಂದಾನಗರಿಯ ಜನ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.

TV24 News Desk
the authorTV24 News Desk

Leave a Reply