ರಾಜ್ಯ

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ

ಚಿತ್ರದುರ್ಗ: ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್ಗೆ ಬೀಳಿಸುವ ಯತ್ನ ನಡೆದಿದೆ. ವಿಡಿಯೋ ಕಾಲ್ ಮಾಡಿ ಶಾಸಕರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿದ್ದು ,ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರಿಗೆ ವಿಡಿಯೋ ಕಾಲ್ ಬಂದಿದೆ. ಅದನ್ನು ರಿಸಿವ್ ಮಾಡುತ್ತಿದ್ದಂತೆ ಅದರಲ್ಲಿ ಅಶ್ಲೀಲ ದೃಶ್ಯ ಕಂಡು ತಿಪ್ಪಾರೆಡ್ಡಿ ಅವರು ಮೊಬೈಲನ್ನು ಪಕ್ಕಕ್ಕೆ ಇಟ್ಟಿದ್ದಾರೆ. ಬಳಿಕ ಹನಿಟ್ರ್ಯಾಪ್ಗೆ ಯತ್ನಿಸಿದ್ದ ಕಿಡಿಗೇಡಿಗಳು ಕರೆ ಕಡಿತವಾದ ನಂತರ ಅಶ್ಲೀಲ ವಿಡಿಯೋ ವಾಟ್ಸಾಪ್ ಮಾಡಿದ್ದಾರೆ. ವಿಡಿಯೋ ವಾಟ್ಸಾಪ್ಗೆ ಬಂದದನ್ನು ಕಂಡು ತಿಪ್ಪಾರೆಡ್ಡಿ ಅವರು ತಮ್ಮವರಿಗೆ ಹೇಳಿ ವಿಡಿಯೋ ಕಾಲ್ ಮಾಡಿದ್ದ ನಂಬರ್ ಬ್ಲಾಕ್ ಮಾಡಿಸಿದ್ದಾರೆ. ಬಳಿಕ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಿಖೆ ವೇಳೆ ಈ ವಿಡಿಯೋ ಕಾಲ್, ರಾಜಸ್ಥಾನ, ಒಡಿಶಾದಿಂದ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ. ತಿಪ್ಪಾರೆಡ್ಡಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದ ಯುವತಿ ಖಾಸಗಿ ಭಾಗಗಳನ್ನು ತೋರಿಸಿದ್ದಳು. ತಕ್ಷಣವೇ ಮೊಬೈಲ್ ಪಕ್ಕಕ್ಕೆ ಇಟ್ಟಿರುವುದಾಗಿ ಜಿ.ಹೆಚ್.ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

 

TV24 News Desk
the authorTV24 News Desk

Leave a Reply