Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಚಿಕ್ಕೋಡಿಯಲ್ಲಿ ಅಪ್ಪು ಪುತ್ಥಳಿ ಲೋಕಾರ್ಪಣೆ

ಚಿಕ್ಕೋಡಿ : ಪುರಸಭೆ, ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಎಂ. ಕೆ. ಕವಟಗಿಮಠ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಿರುವ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಪುತ್ಥಳಿ ಅನಾವರಣವನ್ನು  ಚಿಂಚಣಿಯ ಶ್ರೀ ಮ.ನಿ.ಪ್ರ ಅಲ್ಲಮಪ್ರಭು ಸ್ವಾಮಿಜಿಗಳು, ಚಿಕ್ಕೋಡಿ ಚರಮೂರ್ತಿ ಮಠದ ಶ್ರೀ ಮ.ನಿ.ಪ್ರ. ಸಂಪಾದನ ಸ್ವಾಮಿಜಿಗಳ  ದಿವ್ಯ ಸಾನಿಧ್ಯದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆಯವರು ನೆರವೇರಿಸಿದರು.

ಕರ್ನಾಟಕ ಸರ್ಕಾರವು ಡಾ. ಪುನೀತ್ ರಾಜಕುಮಾರ್ ಅವರಿಗೆ “ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಗೌರವಿಸಿದ ಸುದಿನದಂದು ಚಿಕ್ಕೋಡಿ ನಗರದಲ್ಲಿ  ಅಪ್ಪು ಪುತ್ಥಳಿ ಲೋಕಾರ್ಪಣೆ ಮಾಡಿರುವುದು ಪುನೀತ ರಾಜಕುಮಾರ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ ಜಗದೀಶ  ಕವಟಗಿಮಠ, ಸಚಿನ ಧನಪಾಲ ಪಾಟೀಲ, ಪುರಸಭೆ ಅಧ್ಯಕ್ಷರು, ಸದಸ್ಯರು, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

TV24 News Desk
the authorTV24 News Desk

Leave a Reply

error: Content is protected !!