ಬೆಳಗಾವಿಬೆಳಗಾವಿ ನಗರ

ಕುಂದಾನಗರಿಯಲ್ಲಿ  ಗಂಧದಗುಡಿ ಸಂಭ್ರಮ

ಬೆಳಗಾವಿ :ಅಪ್ಪು ಅಭಿಮಾನಿಗಳಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿ ಆಚರೆನೇ ಮಾಡಿ ಅಪ್ಪು ಕಟೌಟಿಗೆ ಕ್ಷೀರಾಭಿಷೇಕ ಮಾಡಲಾಯಿತು.ಇಂದು ರಾಜ್ಯಾದ್ಯಂತ  ಗಂಧದಗುಡಿ ಬೆಳಗಾವಿಯ ಥೇಟರಗಳಲ್ಲಿ ರಿಲೀಸ್ ಆಗಿದೆ  ಥೇಟರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೆಳಗಾವಿಯಲ್ಲಿಗಂಧದಗುಡಿ ಮೊದಲನೇ ಷೋ ಟಿಕೆಟ್ ಹೌಸ್ ಫುಲ್ ಆಗಿತ್ತು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೊನೇಯದಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಗಂಧದಗುಡಿ ಚಿತ್ರ, ಅದ್ದೂರಿಯಾಗಿ ಬಿಡುಗಡೆ ಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಅವರನ್ನು ತೆರೆಯ ಮೇಲೆ ಕಂಡ ಅಭಿಮಾನಿಗಳು ಮತ್ತೆ ಹುಟ್ಟಿ ಬಾ ಅಪ್ಪು ಎಂದು ಭಾವುಕರಾಗಿದ್ದರೆ.

ದಿವಂಗತ ಪುನೀತ ರಾಜಕುಮಾರ್ ಅಕಾಲಿಕವಾಗಿ ಅಗಲಿದ ತಮ್ಮ ನೆಚ್ಚಿನ ನಟನನ್ನು ಪರದೆಯ ಮೇಲೆ ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡರು. ಇತ್ತ ಕುಂದಾನಗರಿ ಬೆಳಗಾವಿಯಲ್ಲಿ ಅಪ್ಪು ಅಭಿಮಾನಿಗಳ ವತಿಯಿಂದ ಗಂಧದಗುಡಿ ಚಿತ್ರ ವೀಕ್ಷಿಸಲು ಬಂದ ವೀಕ್ಷಕರಿಗೆ ಸಸಿ ನೀಡುವ ಕಾರ್ಯಕ್ರಮ ಇಡಲಾಗಿತ್ತು.ಇಂದು ಮುಂಜಾನೆ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ  ಅಪ್ಪು ಕಟೌಟಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಅಲ್ಲದೆ ಅಭಿಮಾನಿಗಳು  ಅಪ್ಪುವಿಗೆ ಜೈಕಾರ್ ಕೂಗಿ ಸಂಭ್ರಮಿಸಿದ್ದಾರೆ.

TV24 News Desk
the authorTV24 News Desk

Leave a Reply