ಬೆಳಗಾವಿಬೆಳಗಾವಿ ನಗರ

ಜನವರಿಯಲ್ಲಿ ಮುರಗೇಂದ್ರಗೌಡ ಪಾಟೀಲ್ ಡೇ ನೈಟ್ ಕ್ರಿಕೆಟ್ ಪಂದ್ಯಾವಳಿ

ಬೆಳಗಾವಿ:ಮುರಗೇಂದ್ರಗೌಡ ಪಾಟೀಲ್ ಬೆಳಗಾವಿ ಟೆನಿಸ್ ಬಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಅರ್ಜುನ್ ಸ್ಪೋರ್ಟ್ಸ್ ವತಿಯಿಂದ ಜನವರಿ ಮೊದಲ ವಾರದಲ್ಲಿ ಲವ್‌ಡೇಲ್ ಸೆಂಟ್ರಲ್ ಶಾಲೆಯ ಹುಲ್ಲುಹಾಸಿನಲ್ಲಿ ಆಯೋಜಿಸಲಾಗಿದೆ. 
ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯ ಟಿಪಿಎಲ್ 
ಮುರಗೇಂದ್ರಗೌಡ ಪಾಟೀಲ ಪ್ರಾಯೋಜಕತ್ವದಲ್ಲಿ ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯ ಟೆನಿಸ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಲಿವೆ.
ಐಪಿಎಲ್ ಮಾದರಿಯ ಟೆನಿಸ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಹಗಲು ರಾತ್ರಿ ನಡೆಯಲಿವೆ.ಭಾಗವಹಿಸುವ ತಂಡಗಳು ಹಗಲು ರಾತ್ರಿ ಆಡುತ್ತಾರೆ.ಈ ಪಂದ್ಯಾವಳಿ 10 ಓವರ್ ಗಳದ್ದಾಗಿದ್ದು,ಆಟಗಾರರು ಬಣ್ಣ ಬಣ್ಣದ ಬಟ್ಟೆಯಲ್ಲಿ ಮಿಂಚಲಿದ್ದಾರೆ ಪಂದ್ಯಗಳು ರೌಂಡ್ ರಾಬಿನ್ ಲೀಗ್ ಶೈಲಿಯಲ್ಲಿ ನಡೆಯುತ್ತವೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮಮೊಂದರಲ್ಲಿ ಪಂದ್ಯಾವಳಿಯ ಆಯೋಜಕರಾದ ಮಿಲಿಂದ ಚೌವಾಣ ಮುರಗೇಂದ್ರಗೌಡ ಪಾಟೀಲ್ ಅವರಿಗೆ  ಹೂ ಗುಚ್ಛ ಕೊಟ್ಟು ಸನ್ಮಾನಿಸಿದರು ಈ ಸಂದರ್ಭದಲ್ಲಿ ಬೈರೇಗೌಡ ಪಾಟೀಲ, ಸ್ಪರ್ಧೆಯ ಸಂಯೋಜಕ ಪರುಶರಾಮ ಪಾಟೀಲ,  ಸಚಿನ್ ಸಾಳುಂಖೆ ಪ್ರಸಾದ್ ,ನಾಕಾಡಿ ಸಂದೀಪ ಚವ್ಹಾಣ , ಯತೀಂದ್ರ ದೇಶಪಾಂಡೆ ಇನ್ನಿತರರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply