ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಮಾಡುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಉತ್ತಮ ಸೇವೆಯನ್ನು ನೀಡುವ ಹಾಗೂ ಆಡಳಿತ ಸುಧಾರಣೆ ಮತ್ತು ಜನಸ್ನೇಹಿ ಆಡಳಿತಕ್ಕಾಗಿ ಪ್ರಾಯೋಗಿಕವಾಗಿ ಮೊದಲನೇ ಹಂತದಲ್ಲಿ ಮಾರ್ಚ್ 2024 ರಿಂದ ಪ್ರಾರಂಭಿಸುತ್ತಾ ಬೆಂಗಳೂರು ನಗರ ಜಿಲ್ಲೆಯ 5 ನೋಂದಣಿ ಜಿಲ್ಲೆಗಳಲ್ಲಿ ಪ್ರತಿ ಒಂದು ನೋಂದಣಿ ಜಿಲ್ಲೆಯಲ್ಲಿ ಒಂದು ಉಪ ನೋಂದಣಿ ಕಛೇರಿಯು ಪಾರದರ್ಶಕ ವಾರದ ಸರದಿಯ ಆಧಾರದ ಮೇಲೆ ಮತ್ತು ಬೆಂಗಳೂರು ಗ್ರಾಮಾಂತರ ನೋಂದಣಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಛೇರಿಗಳ ಪೈಕಿ ಯಾವುದಾದರೂ ಒಂದು ಉಪ ನೋಂದಣಿ ಕಛೇರಿ ಪಾರದರ್ಶಕವಾದ ವಾರದ ಸರದಿಯ ಆಧಾರದ ಮೇಲೆ ಪ್ರತಿ ಭಾನುವಾರ ಕಾರ್ಯನಿರ್ವಹಿಸುವಂತೆ ಹಾಗೂ ಇದಕ್ಕೆ ಬದಲಾಗಿ ಆ ವಾರದ ಮಂಗಳವಾರದ ದಿನದಂದು ಸದರಿ ಕಛೇರಿಯು ಪರಿಹಾರವಾಗಿ ರಜೆಯನ್ನು ನೀಡಲು ಆದೇಶಿಸಿದೆ.
tv24plus.in > Blog > ರಾಜ್ಯ > ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್..!







