ಬೆಳಗಾವಿ:
ಬೆಳಗಾವಿಯಲ್ಲಿ ಒಂದೇ ಕುಟುಂಬದ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬೆಳಗಾವಿಯ ಜೋಶಿ ಮಾಳದಲ್ಲಿರುವ ಕುಂಡೇಕರ್ ಕುಟುಂಬಸ್ಥರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾಲ್ವರು ಏಕಕಾಲಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದಾರೆ. ಸಂತೋಷ್ ಕುಂಡೇಕರ್,ಸುವರ್ಣ ಕುಂಡೇಕರ್,ಮಂಗಳಾ ಕುಂಡೇಕರ್ ಹಾಗೂ ಸುನಂದಾ ಕುಂಡೇಕರ್ ಆತ್ಮಹತ್ಯೆಗೆ ಯತ್ನಿಸಿದ್ದು ನಾಲ್ವರ ಪೈಕಿ ಸಂತೋಷ್, ಸುವರ್ಣಾ,ಮಂಗಳಾ, ಸಾವನ್ನಪ್ಪಿದ್ದು ಸುನಂದಾ ಸ್ಥಿತಿ ಗಂಭೀರವಾಗಿದೆ.ಸಧ್ಯ ಸುನಂದಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ತಾಯಿ, ಮಗ, ಹಾಗೂ ಮಗಳು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಧ್ಯ ಶಹಪೂರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
