ಬೆಳಗಾವಿ:



ಬೆಳಗಾವಿ ಕಾಂಗ್ರೆಸ್ ನಲ್ಲಿ ಬೆಳಗಾವಿ ಮಹಾನಗರ ವ್ಯಾಪ್ಯಿಯ ಅಧ್ಯಕ್ಷ ಸ್ಥಾನದ ಆಯ್ಕೆ ಕಾಂಗ್ರೇಸ್ ಪಾಲಿಕೆ ಬಹುದೊಡ್ಡ ಕಗ್ಗಂಟಾಗಿದೆ. ನಿನ್ನೆಯಷ್ಟೇ ಬೆಳಗಾವಿಯ ಮಹಾನಗರ ಅಧ್ಯಕ್ಷರ ಆಯ್ಕೆಯ ವಿಚಾರವಾಗಿ ಕಾಂಗ್ರೇಸ್ ಕಚೇರಿಯಲ್ಲಿ ಎಐಸಿಸಿ ವೀಕ್ಷಕರ ಮುಂದೆಯೇ ಕಾರ್ಯಕರ್ತರು ಪರಸ್ಪರ ಎಳೆದಾಡಿಕೊಡಿದ್ದರು ಇದು ದೊಡ್ಡ ಸುದ್ದಿಯಾಗಿತ್ತು. ಸ್ಥಳದಲ್ಲಿಯೇ ಇದ್ದ ಪಕ್ಷದ ಹಿರಿಯರು ಮತ್ತು ಪೊಲೀಸರು ಎರಡೂ ಕಡೆಯ ಕಾರ್ಯಕರ್ತರನ್ನು ಸುಮ್ಮನಿರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ ಇದಾದ ಬಳಿಕ ಇಂದೂ ಸಹ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮತ್ತೆ ಕಾರ್ಯಕರ್ತರ ಮಧ್ಯೆ ವಾಗ್ವಾದವಾದ ಘಟನೆ ನಡೆದಿದೆ.ಮಹಾನಗರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರ
ಕಳೆದ ಎರಡು ದಿನಗಳಿಂದ ಎಐಸಿಸಿಯಿಂದ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ಅಭಿಪ್ರಾಯ ಸಂಗ್ರಹಣೆಯ ವೇಳೆ ಫಯಿಮ್ ನಾಯಿಕವಾಡಿ, ಹಾಗೂ ಅಜಿಂ ಪಟವೇರ ನಡುವೆ ವಾಗ್ವಾದ ಶುರುವಾಗಿದೆ ಎನ್ನಲಾಗಿದ್ಷು ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮತ್ತೆ ಭಿನ್ನಾಭಿಪ್ರಾಯ ಎದ್ದಿದೆ.ಪಾಲಿಕೆ ಸದಸ್ಯ ಅಜೀಂ ಪಟವೇಗಾರ್, ಫಯಿಮ್ ನಾಯಕವಾಡಿ ನಡುವೆ ವಾಗ್ವಾದ ಶುರುವಾಗಿ ಒಬ್ಬರನ್ನೊಬ್ಬರು ಬೈದಾಡಿಕೊಂಡ ಸಂಗತಿಯೂ ಸಹ ನಡೆದಿದೆ. ಸ್ಥಳದಲ್ಲಿಯೇ ಇದ್ದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಮಧ್ಯ ಪ್ರವೇಶ ಮಾಡಿ ಇಬ್ಬರನ್ನೂ ತಣ್ಣಗಾಗಿಸುವ ಹಾಗೂ ಸಮಾಧನಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೇ ಸ್ಥಳದಲ್ಲಿಯೇ ಇದ್ದ ಪೊಲೀಸರು ಕಾರ್ಯಕರ್ತರನ್ನು ಸಮಾಧಾನ ಪಡಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಮಹಾನಗರ ವ್ಯಾಪ್ತಿಯ ಅಧ್ಯಕ್ಷನಾಗೋಕೆ ಹಲವಾರು ಆಕಾಂಕ್ಷಿಗಳಿದ್ದು ಒಬ್ಬರಿಗಿಂತ ಒಬ್ಬರು ಪೈಪೋಟಿ ಒಡ್ಡುತ್ತಿದ್ದು ಅಭಿಪ್ರಾಯ ಸಂಗ್ರಹನೆಯ ವೇಳೆಯೇ ಈ ರೀತಿಯ ಘಟನೆ ನಡೆದಿರುವುದು ಕಾಂಗ್ರೇಸ್ ಶಿಸ್ತನ್ನು ಪ್ರಶ್ನೆ ಮಾಡುವಂತಿದೆ.









