Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ವಿಜಯಪುರ

ಕಾಂತಾರ ಬಗ್ಗೆ ವಿವಾದಾತ್ಮಕ ಹೇಳಿಕೆ ನಟ ಚೇತನ್‌ ವಿರುದ್ದ ಯತ್ನಾಳ್‌ ವಾಗ್ದಾಳಿ 

ವಿಜಯಪುರ :  ನಟ ಚೇತನ್ ನಾಲಾಯಕ್‌ ಎಂದು ಶಾಸಕ ಯತ್ನಾಳ ವಾಗ್ದಾಳಿ ನಡೆಸಿದರು. ಕಾಂತಾರಾ ಸಿನಿಮಾ ವಿರುದ್ಧ ನಟ ಚೇತನ ಹೇಳಿಕೆ ವಿಚಾರಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಅವರು “ವಿಜಯಪುರಕ್ಕೂ ನಾಟಕ ಮಾಡಲು ಬಂದಿದ್ದ, ಹಿಂದುತ್ವ ಹೆಸರು ಹೇಳಿ ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ, ಎಂದು ಹೇಳಿದರು.

ಹಿಂದೂ ವಿರೋಧಿ ಮಾತನಾಡಿದವರು ಏನೇನು ಆಗಿ ಹೋಗಿದ್ದಾರೆ, ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ” ಎಂದರು. ಕಾಂತಾರ ’ಚಿತ್ರದಲ್ಲಿ ತೋರಿಸಿರುವಂತೆ ಭೂತದ ಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಗೆ ಸೇರಿದ ಆಚರಣೆ ಅಲ್ಲ. ಹಿಂದೂ ಸಂಘನೆಗಳು, ದೈವ ನರ್ತರಕರು ಸೇರಿದಂತೆ ಅನೇಕರು ನಟ ಚೇತನ್‌ ಹೇಳಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

 ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರವು ದೇಶಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ನಟ ರಿಷಬ್‌ ಶೆಟ್ಟಿ ಭೂತ ಕೋಲ ದೈವರಾಧನೆ ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದು ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟ ಚೇತನ್‌ ತಮ್ಮದೇ ಶೈಲಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ದೈವಾರಾಧನೆ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದಿರುವ ನಟ ಚೇತನ್‌ ಅವರ ವಿವಾದಾತ್ಮಕ ಹೇಳಿಕೆಗೆ ಎಲ್ಲೆಡೆಯಿಂದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ನಟ ಚೇತನ್‌ ವಿರುದ್ಧ ಹುಬ್ಬಳ್ಳಿ ಹಾಗೂ ಕಾರ್ಕದಲ್ಲಿ ದೂರು ದಾಖಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!