ಬೆಳಗಾವಿ

ವಿನಯ್ ಕುಲಕರ್ಣಿ ಸಚಿವರಾಗುತ್ತಾರೆ:ಜೈನ ಮುನಿ  

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಆಶೀರ್ವಾದ ..! 
ಬೆಳಗಾವಿ: ಲೋಕಸಭಾ ಚುನಾವಣೆ ಬಳಿಕ ವಿನಯ್ ಕುಲಕರ್ಣಿ ಸಚಿವರಾಗುತ್ತಾರೆ ಎಂದು ಹಲಗಾದ ಜೈನ್ ಬಸದಿಯ ಪ.ಪೂ ಬಾಲಾಚಾರ್ಯ ಶ್ರೀ 108 ಸಿದ್ಧಸೇನ ಮುನಿ ಮಹಾರಾಜರು ಭವಿಷ್ಯ ನುಡಿದಿದ್ದಾರೆ.
ವಿನಯ್ ಕುಲಕರ್ಣಿ ಅವರು ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿರುವ ಜೈನ್ ಬಸದಿ ಭೇಟಿ ನೀಡಿದ್ದು, ಈ ವೇಳೆ ಜೈನ ಮುನಿ ಸಿದ್ಧಸೇನ ಮಹಾರಾಜರು, ನೀವು ಸಚಿವರಾಗುತ್ತೀರಿ, ಧಾರವಾಡ ಜಿಲ್ಲಾ ಉಸ್ತುವಾರಿ ಆಗುತ್ತೀರಿ ಎಂದು ಹೇಳಿ ಆಶೀರ್ವಾದ ಮಾಡಿದ್ದಾರೆ.
ಶಾಸಕ ವಿನಯ್ ಕುಲಕರ್ಣಿಗೆ ಆಶೀರ್ವಾದ ಮಾಡಿದ ಬಳಿಕ ಸಿದ್ಧಸೇನ ಮುನಿ ಮಹಾರಾಜರು, ಡಿಕೆ ಶಿವಕುಮಾರ್ ಅವರಿಗೂ ಆಶೀರ್ವಾದ ಕೊಟ್ಟಿದ್ದೇನೆ. ಅವರೂ ಸಹ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ. ಮೊದಲೇ ಮುಖ್ಯಮಂತ್ರಿ ಹುದ್ದೆ ಕನಸು ಕಾಣುತ್ತಿದ್ದ ಡಿಕೆ ಶಿವಕುಮಾರ್ ಗೆ ಸಿದ್ಧಸೇನ ಮುನಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ.
TV24 News Desk
the authorTV24 News Desk

Leave a Reply