Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ರಾಜ್ಯ

ಲಾರಿಗೆ ಕಾರು ಡಿಕ್ಕಿ 4 ಜನ ಸಾವು,3 ಜನರ ಸ್ಥಿತಿ ಗಂಭೀರ..!

ತುಮಕೂರು ಮೂಲದ 7 ಮಂದಿ ಬೆಳಗಾವಿಗೆ ತೆರಳಿದ್ದರು     
ಚಿತ್ರದುರ್ಗ:ರಾಷ್ಟ್ರೀಯ ಹೆದ್ದಾರಿ 48ರ ಮಲ್ಲಾಪುರದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 48ರ ಮಲ್ಲಾಪುರದ ಬಳಿ ಸಂಭವಿಸಿದೆ. ಮೃತಪಟ್ಟವರನ್ನು ತುಮಕೂರು ಮೂಲದ ಖಲೀಲ್ (42), ತಬ್ರೇಜ್ (13) ಹಾಗೂ ಮಲ್ಲಿಕ (37) ಹಾಗೂ ಬೆಳಗಾವಿ ಮೂಲದ ಶಂಶುದ್ದೀನ್ (40) ಎಂದು ಗುರುತಿಸಲಾಗಿದೆ.
 
ಅಪಘಾತದಲ್ಲಿ ಕಾರಿನಲ್ಲಿದ್ದ ಮಹೀ, ರೆಹಾನ್ ಮತ್ತು ರೆಹಮಾನ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರ ಪೈಕಿ ರೆಹಮನ್ ಸ್ಥಿತಿ ಗಂಭೀರವಾಗಿದೆ. ತುಮಕೂರು ಮೂಲದ 7 ಮಂದಿ ಬೆಳಗಾವಿಗೆ ತೆರಳಿದ್ದರು. ಇಂದು ಬೆಳಗ್ಗೆ  ಕಾರಿನಲ್ಲಿ ಇವರೆಲ್ಲರೂ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಚಿತ್ರದುರ್ಗ ಬಳಿಯ ಮಲ್ಲಾಪುರ-ಗೊಲ್ಲರಹಟ್ಟಿ ಮಧ್ಯೆ ಬರುತ್ತಿದ್ದಂತೆ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿ ಇವರ ಗಮನಕ್ಕೆ ಬಾರದೆ ಚಾಲನೆ ಮಾಡುತ್ತಾ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಲ್ವರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಲಾರಿ ಚಾಲಕನನ್ನು ಬಂಧಿಸಿರುವ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!