ಬೆಳಗಾವಿ

ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿ..! 

ಬೆಳಗಾವಿ: ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಗುರುವಾರ ಐದು ಗೆಟಗಳಿಂದ ಒಂದೂವರೆ ಅಡಿಗಳಷ್ಟು ನೀರನ್ನು ಮಾರ್ಕಂಡೇಯ ಹಾಗು ಹಿಡಕಲ್ ಜಲಾಶಯಗಳಿಗೆ ಬಿಡಲಾಗಿದೆ.
ಕೆಲವೇ ದಿನಗಳ ಹಿಂದೆಗಳಷ್ಟೇ ಬತ್ತಿ ಬರಿದಾಗಿದ್ದ ರಕ್ಕಸಕೊಪ್ಪ ಜಲಾಶಯ ಕಳೆದ ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕಳೆದ ಮಂಗಳವಾರವೇ ಸಂಪೂರ್ಣ ಭರ್ತಿಯಾಗಿತ್ತು. ಹೆಚ್ಚುವರಿ ನೀರನ್ನು ನಿನ್ನೆ  ಮಾರ್ಕಂಡೇಯ ಹಾಗು ಹಿಡಕಲ್ ಜಲಾಶಯಗಳಿಗೆ ಬಿಡಲಾಗಿದೆ.
ನಗರದ ಕುಡಿಯುವ ನೀರಿಗೆ ಜೀವನಾಡಿಯಾಗಿರುವ ರಕ್ಕಸಕೊಪ್ಪ ಜಲಾಶಯ  7 ಲಕ್ಷ ಜನರಿಗೆ ರಕ್ಕಸಕೊಪ್ಪ ಜಲಾಶಯ ಕೇವಲ 6 ತಿಂಗಳು ಕುಡಿಯುವ ನೀರು ಪೂರೈಸಬಹುದೆಂದು ಗುತ್ತಿಗೆ ಕಂಪನಿ ಎಲ್ ಆಂಡ್ ಟಿ ತಿಳಿಸಿದೆ.
TV24 News Desk
the authorTV24 News Desk

Leave a Reply