ಬೆಳಗಾವಿ: ಸದಾಶಿವ ನಗರದ ವಿರೂಪಾಕ್ಷ ರೆಸಿಡೆನ್ಸಿ ಅಪಾರ್ಟಮೆಂಟನ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬಾರಿ ಪ್ರಮಾಣದ ನಕಲಿ ಮದ್ಯವನ್ನು ವಶಪಡಿಕೊಂಡಿದ್ದಾರೆ.
ನಗರದ ವೈನ್ ಶಾಪ ಹಾಗೂ ಬಾರ ಆಂಡ್ ರೆಸ್ಟೋರೆಂಟಗಳಲ್ಲಿ ಖಾಲಿ ಬಾಟಲಗಳನ್ನು ಸಂಗ್ರಹಿಸಿ ಬ್ರ್ಯಾಂಡ್ ಲೇಬಲ್ ಅಂಟಿಸಿ ಕೆಮಿಕಲ್ ಮಿಕ್ಸ್ ಮಾಡಿ ನಕಲಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಹಿಡಿಯುವಲ್ಲಿ ಸಿಸಿಬಿ ಪೊಲೀಸ ನಿರೀಕ್ಷಕ ಅಲ್ತಾಫ ಮುಲ್ಲಾ ನೇತೃತ್ವದ ತಂಡ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ನಾಲ್ಕು ಲಕ್ಷ ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ. ಉಜ್ವಲ ನಗರದ ಹಸನ ಜಾವೇದ ಬೇಪಾರಿ ( 22) ಹಾಗೂ ಹಿಂಡಲಗಾ ವಿಜಯನಗರದ ರಾಕೇಶ ಕೇಶವ ನಾಯಕ(42) ಬಂಧಿಸಿ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.