ಬೆಳಗಾವಿ:
ಬೆಳಗಾವಿಯಲ್ಲಿ ಮಾದಕ ವಸ್ತು ಚರಸ್ ಮಾರಾಟ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬೆಳಗಾವಿ ನಗರ ಪೊಲೀಸರು ಹೆಡೆ ಮುರಿ ಕಟ್ಟಿದ್ದಾರೆ. ಬೆಳಗಾವಿಯ ಸರ್ದಾರ್ ಮೈದಾನದ ಗ್ಯಾಲರಿಯಲ್ಲಿ ರಾಜಾರೋಷವಾಗಿ ಚರಸ್ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಖಡೇಬಜಾರ್ ಪೊಲೀಸರು ಬಂಧಿಸಿದ್ದು ಬಂಧಿತರಿಂದ 4 ಲಕ್ಷ ರೂಪಾಯಿ ಮೌಲ್ಯದ 0.825 ಕಿಲೋ ಗ್ರಾಂ ತೂಕದ ಚರಸ್ ಸೇರಿದಂತೆ ಎರಡು ಐಫೋನ್ ಹಾಗೂ ಎರಡು ಬೈಕ್ ಸೇರಿದಂತೆ ಒಟ್ಟು 4,76,000 ರೂ ಮೌಲ್ಯದ ಬಾಬತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅಜರ್ ಜಹೀದ್,ಇಬ್ರಾಹಿಂ ಗೀವಾಲೆ,ಧನೇಶಖಾನ್ ಕಿತ್ತೂರು, ಸುನೀಲ್ ಸಂಗನಾಯ್ಕರ್ ಎಂದು ಗುರುತಿಸಲಾಗಿದ್ದು ಆರೋಪಿತರ ವಿರುದ್ದ ನಗರದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


