ಅಥಣಿ: ಇಂಡಿಯಾ ಬುಕ್ ಅಪ್ ರೆಕಾರ್ಡ್ 2023 ನಲ್ಲಿ ಕೊಟ್ಟಲಗಿ ಗ್ರಾಮದ 2 ವರ್ಷ 9 ತಿಂಗಳಿನ ಪುಟ್ಟ ಬಾಲಕ ಸ್ಕಂದ ಗುರುರಾಜ ಮಳಸಿದ್ದನವರ ದಾಖಲೆ ಮಾಡಿದ್ದಾನೆ.
ಅಥಣಿ ತಾಲೂಕ ಕೊಟ್ಟಲಗಿಯ ಗುರುರಾಜ ಹಾಗೂ ಸುಶ್ಮಿತಾ ದಂಪತಿಯ ಪುತ್ರ ಈ ಬಾಲಕ. ತಂದೆ-ತಾಯಿ ಇಬ್ಬರೂ ಸಾಫ್ಟವೇರ್ ಎಂಜಿನಿಯರ್.ಬಾಲಕ ವಾಹನ, ಬಣ್ಣ, ಸಂಕೇತಗಳನ್ನು ಗುರುತಿಸುವುದು, ಪ್ರಾಸ ಹೇಳುವುದು, ಶ್ಲೋಕ ಹೇಳುವ ಮೂಲಕ ದಾಖಲೆ ಮಾಡಿದ್ದಾನೆ.
‘ಮೇ 8ರಂದು 18 ವಾಹನಗಳು, 10 ಬಣ್ಣಗಳು, 6 ಡ್ರೈಫ್ರುಟ್ಸ್, 13 ಮೃಗಗಳು, 7 ರಾಷ್ಟ್ರೀಯ ಸಂಕೇತಗಳು, 9 ಶ್ಲೋಕಗಳು, 15 ಶಿಶುಪ್ರಾಸಗಳು, ವಾರದ ದಿನಗಳು, ತಿಂಗಳು, ಎಬಿಸಿಡಿ ಹಾಗೂ ಶಬ್ದಗಳು, ಮಹಾಭಾರತ ಹಾಗೂ ರಾಮಾಯಣದ ಪಾತ್ರಗಳನ್ನು ಹೇಳುವ ಮೂಲಕ ಈ ದಾಖಲೆ ಮಾಡಿದ್ದಾನೆ’ ಎಂದು ಪಾಲಕರು ತಿಳಿಸಿದ್ದಾರೆ.








