Uncategorized

ಚಲಿಸುತ್ತಿದ್ದ ಬಸ್ ಟಯರ್ ಬ್ಲಾಸ್ಟ್!ತಪ್ಪಿದ ಭಾರಿ ಅನಾಹುತ!

ಬೆಳಗಾವಿ:

ಚಲಿಸುತ್ತಿದ್ದ ಬಸ್ಸಿನ ಹಿಂದಿನ ಚಕ್ರ ಸ್ಪೋಟಗೊಂಡು ನಿರ್ವಾಹಕಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದಿದೆ.‌ಬೆಳಗಾವಿ ಮಹಾನಗರದಿಂದ ಅಥಣಿಗೆ ಬಸ್ಸು ಹೊರಟಿತ್ತು ಎನ್ನಲಾಗಿದ್ದು ಬಸ್ಸು ರಾಯಭಾಗ ಪಟ್ಟಣದಿಂದ ಹೊರ ಬರುತ್ತಿದ್ದಂದೆ ದುರ್ಘಟನೆ ನಡೆದಿದೆ. ಬಸ್ಸು ಚಲಿಸುತ್ತಿದ್ದಾಗಲೇ ಈ ದುರ್ಘಟನೆ ನಡೆದಿದ್ದು ಘಟನೆಯಲ್ಲಿ ಚಿಕ್ಕಪುಟ್ಟ ಗಾಯಗಳೊಂದಿಗೆ ನಿರ್ವಾಹಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ನಿರ್ವಾಹಕಿಯನ್ನು ಚಾಲಕನೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಇನ್ನು ಬಸ್ಸಿನಲ್ಲಿ ಪ್ರಯಾಣಿಕರು ಯಾರೂ ಇಲ್ಲದ್ದರಿಂದ ಯಾವುದೇ ಹೆಚ್ಚಿನ ಅವಘಡ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ರಾಯಭಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply

error: Content is protected !!