Uncategorized

ಅಮರನಾಥ್ ಜಾರಕಿಹೊಳಿ ನೇತೃತ್ವದಲ್ಲಿ ಹರ್ ಘರ್ ತಿರಂಗಾ ರ್ಯಾಲಿ! ರಾರಾಜಿಸಿದ 250 ಮೀಟರ್ ತಿರಂಗಾ

ಬೆಳಗಾವಿ:

ಬೆಳಗಾವಿ ‌ಜಿಲ್ಲೆಯ ಗೋಕಾಕ ನಗರದಲ್ಲಿ 80 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಹರ್ ಘರ್ ತಿರಂಗಾ ರ್ಯಾಲಿ ಅದ್ದೂರಿಯಿದ ಜರುಗಿತು. ಗೋಕಾಕದ ಗೋಕಾಕದ ಬಿಜೆಪಿ ಕಾರ್ಯಕರ್ತರು ಹಾಗೂ ಸಾವಿರಾರು ದೇಶಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ತಿರಂಗಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಪ್ರಮುಖವಾಗಿ 250 ಮೀಟರ್ ಉದ್ಧದ ತಿರಂಗಾ ಹಿಡಿದು ಕಾರ್ಯಕರ್ತರು ಹೆಜ್ಜೆ ಹಾಕಿದರು. ಗೋಕಾಕ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ಶುರುವಾದ ತಿರಂಗಾ ರ್ಯಾಲಿಯು ಗೋಕಾಕ ನಗರದ ಬಸವೇಶ್ವರ ವೃತ್ತಕ್ಕೆ ಬಂದು ಕೊನೆಗೊಂಡಿತು.ಹರ್ ಘರ್ ತಿರಂಗಾ ಯಾತ್ರೆಯು ದೇಶಾಭಿಮಾನದ ಕಿಚ್ಚನ್ನು ಹಾಗೂ ದೇಶಭಕ್ತಿಯನ್ನು ಎಲ್ಲರಲ್ಲಿ ಬಿತ್ತುವ ಕಾರ್ಯ ಮಾಡಿತು. ರ್ಯಾಲಿಯಲ್ಲಿ ಬಿಜೆಪಿ ಮುಖಂಡರುಗಳು ಹಾಗೂ ಬಿಜೆಪಿಯ ಕಾರ್ಯಕರ್ತರು ಗೋಕಾಕನ ಸಾರ್ವಜನಿಕರೂ ಸಹ ಭಾಗಿಯಾಗಿದ್ದರು.

TV24 News Desk
the authorTV24 News Desk

Leave a Reply

error: Content is protected !!