Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

15 ಕುರಿಗಳನ್ನು ಬಲಿ ಪಡೆದ ಖತರ್ನಾಕ ತೋಳ

ಮದಿಹಳ್ಳಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಬೆಳಂ ಬೆಳಿಗ್ಗೆ ತೋಳದ ಬಾಯಿಗೆ ಸಿಲುಕಿ ೧೫ ಕುರಿಗಳನ್ನ ಬಲಿಪಡೆದ ಘಟನೆ ಬೆಳಿಗ್ಗೆ ತಡವಾಗಿ ಬೆಳಕಿಗೆ ಬಂದಿದೆ.ಇನ್ನೂ ಕರೆಪ್ಪಾ ಖುಬಾನಗೋಳ ಸಾಕಿನ ಮದಿಹಳ್ಳಿ ಗ್ರಾಮದಲ್ಲಿ ನಿನ್ನೆ ಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಮನೆಯವರೆಲ್ಲ ನಾಟಕ ನೊಡಲು ಹೊಗಿದ್ದರು ಈ ಸಮಯದಲ್ಲಿ ದಾಳಿ ಮಾಡಿದ ಯಮಸ್ವರೂಪಿ ತೋಳ ಕುರಿಗಳ ಜೀವ ಪಡೆದೆ ಬಿಟ್ಟಿತ್ತು.ಇನ್ನೂ ಹಲವೂ ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿದ್ದರು ಮೂಲತಃ (ಕುರುಬರೆ) ಒಟ್ಟು ೬೦ ಕುರಿಗಳ ಪೈಕಿ ೧೫ ಕುರಿಗಳ ಮೇಲೆ ದಾಳಿ ಮಾಡಿದ ತೋಳ ಕುರಿಗಳನ್ನ ಬಲಿ ಪಡೆದಿದೆ ೨ ಕುರಿಗಳನ್ನ ಮಾತ್ರ ಎಳೆದೊಯ್ದಿದೆ ಇನ್ನೂ ೧೩ ಕುರಿಗಳು ಮಾತ್ರ ಅಲ್ಲೆ ಬಿಟ್ಟು ಹೊಗಿದೆ.ಎಂದು ಕರೆಪ್ಪ ಖುಬಾನಗೊಳ ಇವರು ಮಾಧ್ಯಮಕ್ಕೆ ,
 ಮಾಹಿತಿ ನೀಡಿದ್ದಾರೆ.ಇನ್ನೂ ಘಟನೆ ಬಗ್ಗೆ ಮಾಹಿತಿ ತಿಳಿದ ಹುಕ್ಕೇರಿ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದಾರೆ.ಇನ್ನೂ ಪಶು ಇಲಾಖೆ ವೈದ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!