ಬೆಳಗಾವಿ

ಬಸ್‌- ಕಾರ್‌ ಡಿಕ್ಕಿ ಪ್ರಯಾಣಿಕರಿಗೆ ಗಾಯ 

ಚಿಕ್ಕೋಡಿ : ಸಾರಿಗೆ ಬಸ್‌- ಕಾರ್‌ ಮಖಾಮುಖಿ ಡಿಕ್ಕಿ ಹೊಡೆದ ಪರಿಣಾಮ  ೨  ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ  ನಡೆದಿದೆ. ಕಾರಿನ ಮುಂಭಾಗ ಜಂಖಗೊಂಡಿದೆ.ಮಹಾರಾಷ್ಟ್ರದ ಮೂಲದ ಸಂಗ್ರಾಮ್ ಮತ್ತು ಅಜೀತ್ ಎಂಬ ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರಗೆ ಸಾಗಿಸಲಾಗಿದೆ.ಇಬ್ಬರು ವ್ಯಕ್ತಿಗಳು ಮಿರಜನಿಂದ ಬೆಳಗಾವಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply