Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ತನ್ನ ತಪ್ಪಿನಿಂದ ಕಾರಿನ ಗ್ಲಾಸ್ ಒಡೆದು ಮರಾಠಿ ಭಾಷಿಗರ ಮೇಲೆ ಗೂಬೆ ಕೂರಿಸಿದ್ದ.!!

ಬೆಳಗಾವಿ:ಮರಾಠಿ ಭಾಷಿಗರು ಕಲ್ಲು ತೂರಾಟ ನಡೆಸಿ, ಕಾರಿನ ಗಾಜು ಒಡೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ ಸರ್ಕಾರಿ ವಾಹನದ ಚಾಲಕ ಪೊಲೀಸರ ವಿಚಾರಣೆಯಲ್ಲಿ ಸತ್ಯ ಹೇಳಿದ್ದಾನೆ. ತಾನೇ ಗಾಜು ಒಡೆದಿರುವುದಾಗಿ ಚಾಲಕ ತಪ್ಪೋಪ್ಪಿಕೊಂಡಿದ್ದಾನೆ.

ಬೆಂಗಳೂರಿನ ಚಾಮರಾಜ್ ಪೇಠನಿಂದ ಚಾಲಕ ಚೇತನ್ ಬೆಳಗಾವಿ ಅಧಿವೇಶನಕ್ಕೆ ತೆರಳಿದ್ದನು.ಬೆಳಗಾವಿಗೆ ಬರುತ್ತಿದ್ದಾಗ ತಡಸ್ ಎಂಬಲ್ಲಿ ಚಾಲಕ ವಾಹನ ನಿಲ್ಲಿಸಿ ಬಾರ್ ನಲ್ಲಿ ಮದ್ಯ ಸೇವಿಸಿದ್ದಾನೆ.ನಂತರ ಪಾನಮತ್ತ ಚಾಲಕ ಸ್ಟೀಲ್ ಬಾರ್ ತುಂಬಿದ್ದಲಾರಿಗೆ ಡಿಕ್ಕಿ ಹೊಡೆದು ಬೊಲೆರೋ ಜೀಪ್ ಗ್ಲಾಸ್ ಒಡೆದಿದ್ದಾನೆ. ಮುಂದೆ ಬೆಳಗಾವಿಯಲ್ಲಿ ಮರಾಠಿ ಭಾಷಿಗರು ಅಟ್ಟಹಾಸ ಮೆರೆದಿದ್ದಾರೆ ಎಂದು ದೂರು ನೀಡಿದ್ದ. ಸುವರ್ಣ ಸೌಧದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಾಠಿ ಭಾಷಿಗರು ವಾಹನಕ್ಕೆ ಕಲ್ಲು ಎಸೆದು ಗಾಜು ಒಡೆದಿದ್ದಾರೆ ಎಂದು ಚಾಲಕ ನೆಪ ಸೃಷ್ಟಿಸಿದ್ದಾನೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಚಾಲಕನನ್ನು ಹಿರೇ ಬಾಗೇವಾಡಿ ಠಾಣೆಗೆ ಕರೆಸಿ ದೂರು ದಾಖಲಿಸಿದ್ದಾರೆ. ಆಗ ಹಿರೇ ಬಾಗೇವಾಡಿ  ಟೋಲ್ ಗೇಟ್ ನಲ್ಲಿ ಸಿ.ಸಿ. ಟಿ.ವಿ. ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಅದಾಗಲೇ ಗಾಜು ಒಡೆದಿರೋದು ಕಂಡುಬಂದಿದೆ.ತನ್ನ ತಪ್ಪನ್ನು ಮರೆಮಾಚಲು ಮರಾಠಿ ಭಾಷಿಗರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಚಾಲಕ ಸುಳ್ಳು ಹೇಳಿದ್ದು, ವಿಚಾರಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ.

TV24 News Desk
the authorTV24 News Desk

Leave a Reply

error: Content is protected !!