Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಸಿಎಂ ಜನರ ದಾರಿ ತಪ್ಪಿಸುತ್ತಿದ್ದಾರೆ: ಸಿಎಂ ಕೃಷ್ಣ

ಬೆಳಗಾವಿ :ಸ್ಪರ್ಶ ಒಬಿಸಿ ಜಾತಿಗಳಾದ ಬಂಜಾರಾ  ಲಂಬಾಣಿ, ಬೋವಿ ಇನ್ನುಳಿದ ಸಮುದಾಯಗಳನ್ನು ರಾಜ್ಯ ಪರಿಷಿಷ್ಠ ಜಾತಿ ಪಟ್ಟಿಯಿಂದ ತೆಗೆದು ಹಾಕಬೇಕೆಂದು ಡಾ. ಅಂಬೇಡ್ಕರ ಪೀಪಲ್ಸ್ ಪಾರ್ಟಿ ಒತ್ತಾಯಿಸಿದೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಪಿಪಿ ಯುವ ಘಟಕದ ರಾಜ್ಯಾಧ್ಯಕ್ಷ ಸಿಎಂ ಕೃಷ್ಣ ಸರಕಾರ ನಮ್ಮ ಮೇಲೆ ಮಲತಾಯಿ ದೊರಣಿ ಮಾಡುತ್ತಿದ್ದು ಸ್ಪರ್ಶ ಒಬಿಸಿ ಜಾತಿಗಳಾದ ಬಂಜಾರಾ  ಲಂಬಾಣಿ, ಬೋವಿ ಇನ್ನುಳಿದ ಸಮುದಾಯಗಳನ್ನು ರಾಜ್ಯ ಪರಿಷಿಷ್ಠ ಜಾತಿ ಪಟ್ಟಿಯಿಂದ ತೆಗೆದು ಹಾಕಲು ಪ್ರಸ್ತಾವನೆ ಸಲ್ಲಿಸಿ ಎಂದು ಆದೇಶ ಹೊರಡಿಸಿದರು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.  ಬೊಮ್ಮಾಯಿ ಸರ್ಕಾರ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ, ಕೇವಲ ಮತಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಜನರ ದಾರಿತಪ್ಪಿಸಿ  ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
TV24 News Desk
the authorTV24 News Desk

Leave a Reply

error: Content is protected !!