ನಿಪ್ಪಾಣಿ: ನಗರದ ಖಾಸಗಿ ಶಾಲೆಯ ಹತ್ತಿರ ನವಜಾತ ಶಿಶು ಬಿಟ್ಟುಹೋಗಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ನಿಪ್ಪಾಣಿ ನಗರದ ಹೊರವಲಯದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವ ಸ್ಥಳೀಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಜೀವ ಉಳಿದಿದೆ.
ಯಾರೋ ನಿರ್ದಯಿಗಳು ಗಂಡು ಶಿಶುವನ್ನು ಚೀಲದಲ್ಲಿಟ್ಟು ಪರಾರಿಯಾಗಿದ್ದಾರೆ. ನವಜಾತ ಶಿಶು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯವಾಗಿದೆ ಎಂದು ಸಿಡಿಪಿಒ ಮಾಹಿತಿ ನೀಡಿದ್ದಾರೆ. ಶಿಶುವಿನ ಹೆತ್ತವರಿಗಾಗಿ ಶೋಧ ನಡೆಸಲಾಗುತ್ತಿದ್ದು ಈ ಕುರಿತು ನಿಪ್ಪಾಣಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.