Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಬಿಜೆಪಿ ಶಾಸಕ ಯಾದವಾಡ ವಿರುದ್ಧ ಸಿಡಿದೆದ್ದ ವಕೀಲ ಸಮೂಹ 

ಬೆಳಗಾವಿ  : ರಾಮದುರ್ಗ ತಾಲೂಕಿನ ಬಟಕುರ್ಕಿ ಯಲ್ಲಿ   ಬಿಜೆಪಿ ಶಾಸಕ ಮಹದೇವಪ್ಪ ಯಾದವಾಡ ಹೇಳಿಕೆ ವಿರೋಧಿಸಿ ಬೆಳಗಾವಿ  ವಕೀಲರ ಸಂಘ  ಕರ್ನಾಟಕ ರಾಜ್ಯ ಸರಕಾರಕ್ಕೆ  ಜಿಲ್ಲಾಧಿಕಾರಿಗಳ  ಮುಖಾಂತರ ಮನವಿ ಸಲ್ಲಿಸಿದರು
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ವಕೀಲ ಸಂಘದ ಪದಾಧಿಕಾರಿಗಳು ಬಟಕುರ್ಕಿ ಕಾಲುವೆ ಯೋಜನೆಗೆ ರೈತರು ತಮ್ಮ ಜಮೀನನ್ನು ಕಳೆದುಕೊಂಡಿರುತ್ತಾರೆ ಸುಮಾರು ದಿನಗಳಿಂದ  ಜಮೀನನ್ನು ಕಳೆದುಕೊಂಡಿದ್ದಕ್ಕೆ ನಷ್ಟ ಪರಿಹಾರ ದೊರೆತಿಲ್ಲ ಅದರ ಕುರಿತು ನ್ಯಾಯಾಲಯದಲ್ಲಿ ಹಾಗೂ ಭೂ ಸ್ವಾದೀನ ಇಲಾಖೆಯಲ್ಲಿ ಹಲವು ವ್ಯಾಜ್ಯಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ರಾಮದುರ್ಗ  ಶಾಸಕ ಮಹದೇವಪ್ಪ ಯಾದವಾಡ ಅವರು ಯಾವುದೇ ಒಂದು ಭರದಲ್ಲಿ ನೀವು ವಕೀಲರ ಹತ್ತಿರ ಹೋಗಬೇಡಿ  ಹೋದರೆ ದುಡ್ಡು ಕಳೆದುಕೊಳ್ಳುತ್ತೀರಿ ಎಂದು ಹೇಳಿಕೆ ನೀಡಿ ಇಡೀ ವಕೀಲ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಶಾಸಕರು  ವಕೀಲ ಸಮುದಾಯಕ್ಕೆ ಕ್ಷಮೆಯನ್ನು ಕೇಳಬೇಕು, ಅವರ ವಿರುದ್ಧ ಕ್ರಿಮಿನಲ್ ಹಾಗೂ ಮಾನನಷ್ಟ  ಮೊಕದ್ದಮೆ ಹೂಡುತ್ತೇವೆ ರಾಮದುರ್ಗ ಶಾಸಕರ ವಿರುದ್ಧ  ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
TV24 News Desk
the authorTV24 News Desk

Leave a Reply

error: Content is protected !!