Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಅಂಬೇಡ್ಕರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ :ಮಹಾ ಸಚಿವನ ಮುಖಕ್ಕೆ ಮಸಿ 

ಬೆಳಗಾವಿ: ಇತ್ತೀಚೆಗೆ ಮಹಾತ್ಮಾ ಪುಲೆ, ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಚಂದ್ರಕಾಂತ ಪಾಟೀಲ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಸಂಬಂಧ ಉದ್ಧವ್ ಠಾಕ್ರೆ ಅವರ ಶಿವಸೇನೆ ಗುಂಪು ಕೂಡ ಕಾರ್ಯಕ್ರಮದ ಸ್ಥಳದ ಬಳಿ ಪ್ರತಿಭಟನೆ ನಡೆಸಿ ಚಂದ್ರಕಾಂತ್ ಪಾಟೀಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಪುಣೆಯ ಕಾರ್ಯಕ್ರಮಕ್ಕೆ ತೆರಳುವ ವೇಳೆ ತೆರಳುತ್ತಿರುವಾಗ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ‌ಪಾಟೀಲ ಮುಖಕ್ಕೆ ವ್ಯಕ್ತಿಯೊಬ್ಬರು ಮಸಿ ಎರಚಿದ ಘಟನೆ ನಿನ್ನೆ ನಡೆದಿದೆ. ಈ ಸಂಬಂಧ ಮೂರು ಜನರನ್ನು  ಪುಣೆ ಮಹಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರತಿಭಟನೆಯಲ್ಲಿದ್ದ ಯುವಕನೋರ್ವ ಪಕ್ಕದಲ್ಲೇ ಬೆಂಗಾವಲು ಸಿಬ್ಬಂದಿಯಿದ್ದರೂ ಚಂದ್ರಕಾಂತ ಪಾಟೀಲರ ಮುಖಕ್ಕೆ ಮಸಿ ಎರಚಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದ ಪೊಲೀಸರು ಯುವಕ ಹಾಗೂ ಪ್ರತಿಭಟನೆಯಲ್ಲಿದ್ದು ಕೃತ್ಯದಲ್ಲಿ ಜೊತೆಗಿದ್ದ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!