


ಬೆಳಗಾವಿ:
ಹರಿತವಾದ ಆಯುಧಗಳನ್ನು ಇಟ್ಟುಕ್ಕೊಂಡು ಹೊರಟಿದ್ದ ಬೈಕ್ ಸವಾರನನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ಗಾಂಧಿನಗರದ ಅಮಿನ್ ಗಲ್ಲಿಯಲ್ಲಿ ಬೈಕ್ ಸವಾರನನ್ನು ಪೊಲೀಸರು ಹಿಡಿದಿದ್ದಾರೆ.
ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್ ಪರಿಶೀಲನೆ ನಡೆಸುವ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು
ರೆಹಾನ ಇಸ್ಮಾಯಿಲ್ ನಧಾಪ್(20) ಎಂದು ಗುರುತಿಸಲಾಗಿದ್ದು ರೆಹಾನ್ ತನ್ನ ಬೈಕಿನಲ್ಲಿ ಕಬ್ಬಿಣದ ಕೊಡಲಿ,ಚಾಕು,ಕೊಯ್ತಾ ಎನ್ನುವ ಹರಿತವಾದ ಆಯುಧಗಳನ್ನ ಇಟ್ಟುಕ್ಕೊಂಡು ಹೋಗುತ್ತಿದ್ದ ಎನ್ನಲಾಗಿದೆ.ಬೆಳಗಾವಿಯ
ಮಾಳಮಾರುತಿ ಠಾಣೆಯ ಪಿಎಸ್ ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆ ವೇಳೆ ಮಾರಕಾಸ್ತ್ರಗಳು ಸಿಕ್ಕಿದ್ದು
ಬೈಕ್ ನಲ್ಲಿ ಮಾರಕಾಸ್ತ್ರಗಳನ್ನ ಇಟ್ಟುಕ್ಕೊಂಡು ಆರೋಪಿ ಹೊರಟಿದ್ದ ಸದ್ಯ ಬೈಕ್,ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದು ಆರೋಪಿಯನ್ನು ವಿಚಾರಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆ ಪೊಲೀಸರು ಮಾಡುತ್ತಿದ್ದು ಯಾಕಾಗಿ ಆತ ಬೈಕಿನಲ್ಲಿ ಮಾರಕಾಸ್ತ್ರಇಟ್ಟುಕೊಂಡು ಹೊರಟಿದ್ದ ಎನ್ನುವುದು ತಿಳಿದು ಬರಬೇಕಿದೆ.ಸದ್ಯ ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









