ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರಿದ್ದು ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡುವ ಮೊದಲೇ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷವೊಡ್ಡಿ ಹಣ ಹಾಗೂ ಮಧ್ಯವನ್ನು ಹಂಚುವವಾರ ಮೇಲೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ತೀವ್ರ ನಿಗಾ ಇಟ್ಟಿದೆ. ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ನಗದು ಹಾಗೂ ಅಕ್ರಮ ಮದ್ಯವನ್ನು ವಿವಿಧೆಡೆ ವಶಪಡಿಸಿಕೊಳ್ಳಲಾಗಿದೆ.ನಿನ್ನೆ ಜಿಲ್ಲೆಯ ಚುನಾವಣಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಮೂಡಲಗಿ ಮತ್ತು ನಿಪಾಣಿಯಲ್ಲಿ 6.8 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಹುಕ್ಕೇರಿ, ಕುಲಗೋಡು, ಐಗಳಿ, ಗೋಕಾಕ ಗ್ರಾಮೀಣ, ಸಂಕೇಶ್ವರ, ಸವದತ್ತಿಯಲ್ಲಿ ದಾಳಿ ನಡೆಸಿ 70 ಸಾವಿರ ಮೌಲ್ಯದ ವಿವಿಧ ಬ್ರಾಂಡ್ಗಳ 200 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಕುಡಚಿಯಲ್ಲಿ ಕಳ್ಳಭಟ್ಟಿಯಿಂದ 195 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
tv24plus.in > Blog > ಜಿಲ್ಲೆ > ಬೆಳಗಾವಿ > ಅಕ್ರಮ ಹಣ,ಹೆಂಡ ವಶಪಡಿಸಿಕೊಂಡ ಜಿಲ್ಲಾ ಪೊಲೀಸರು
the authorTV24 News Desk
All posts byTV24 News Desk
Leave a reply








