ಬೆಳಗಾವಿಬೆಳಗಾವಿ ನಗರ

L&T ಕಂಪನಿಗೆ ಪಾಲಿಕೆಯಿಂದ 21 ಕೋಟಿ ದಂಡ..? 

ಬೆಳಗಾವಿ ನಗರದಲ್ಲಿ ಕಾಮಗಾರಿ ಕುರಿತಾಗಿ ಟೆಂಡರ್ ನೀಡಿದ ಕಂಪನಿಗಳು ನಿಯಮದ ಪ್ರಕಾರ ಕೆಲಸ ಮಾಡದ ಹಿನ್ನೆಲೆಯಲ್ಲಿ 21 ಕೋಟಿ ದಂಡ ನೀಡುವಂತೆ ಬೆಳಗಾವಿ ಮಹಾ ನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ನೋಟೀಸನ್ನು ರವಾನಿಸಿದ್ದಾರೆ .ಬೆಳಗಾವಿ ನಗರದಲ್ಲಿ ಸತತ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆಯನ್ನು ಘನ ಸರ್ಕಾರ ಕಲ್ಪಿಸಿದೆ ಆದರೆ ಟೆಂಡರ್ ತೆಗೆದುಕೊಂಡ ಕಂಪನಿಗಳು ಕೆಲಸವನ್ನು ಪೂರ್ಣಗೊಳಿಸಿದೆ ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿದೆ .ಈ ಕುರಿತು ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ
ಬೆಳಗಾವಿ ನಗರದಲ್ಲಿ ಸತತ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆಯನ್ನು ಘನವೆತ್ತ  ಸರ್ಕಾರ ಕಲ್ಪಿಸಿದೆ ಆದರೆ ಟೆಂಡರ್ ತೆಗೆದುಕೊಂಡ ಕಂಪನಿಗಳು ಕೆಲಸವನ್ನು ಪೂರ್ಣಗೊಳಿಸಿಲ್ಲಾ ಎಲ್ಲಾ ಕಂಪನಿಗಳಿಗೆ ಟೆಂಡರ್ ನೀಡಲಾಗಿತ್ತು 5 ವರ್ಷದ ಅವಧಿಗೆ ನೀಡಿದ ಟೆಂಡರ್ ಮುಂದಿನ ವರ್ಷ ಜೂನ್ 15 ರಂದು ಕೊನೆಗೊಳ್ಳುತ್ತದೆ ಇಲ್ಲಿಯವರೆಗೆ ಕಾಮಗಾರಿ 60%  ಆಗಬೇಕಾಗಿತ್ತು 35  ರಿಂದ36% ಕೆಲಸವಾಗಿದೆ 5.1 / 5 . 2 ಪ್ರಕಾರ ಕಾಮಾಗಾರಿಯಾಗಿಲ್ಲ ಅದರಂತೆ 25 % ದಂಡವನ್ನು ವಿದಿಸಿದ್ದೇವೆ ಹಾಗೆಯೆ ವಿತರಣೆ ಲೈನ ಅಗ್ರಿಮೆಂಟ್ 6 . 1ರ ಪ್ರಕಾರ ಅಲ್ಲಿ ಕೂಡಾ ನಾವು ದಂಡವನ್ನು ವಿದಿಸಿದ್ದೇವೆ. ಈಗಾಗಲೇ 21 ಕೋಟಿ ತಂಡ ನೀಡುವಂತೆ ನೋಟೀಸನ್ನು ನೀಡಿದ್ದೇವೆ ರಸ್ತೆ ಕಾಮಗಾರಿಯಲ್ಲಿ ರೋಡ ಅಗೆದಿದ್ದಾರೆ ನಿರಂತರವಾಗಿ ನಾವು ಸೂಚನೆಗಳನ್ನು ನೀಡುತ್ತಿದ್ದೇವೆ ಅವರಿಗೆ ನೀಡಿರುವ ಟಾರ್ಗೆಟನ್ನು ಪ್ರಗತಿ ಸಾಗಿಸಬೇಕಾಗಿತ್ತು ,ಪ್ರಗತಿ ಸಾಗಿಸದೆ ಇರುವುದರಿಂದ ದಂಡ ವಿಧಿಸಲು ನೋಟಿಸ್ ಕೊಟ್ಟಿದ್ದೇವೆ ,ಬೆಳಗಾವಿ ನಗರದ ತುಂಬಾ ಈ ಸಮಸ್ಯೆಗಳು ಎದುರಾಗಿವೆ ಸ್ಮಾರ್ಟ್ ಸಿಟಿ ಯೋಜನೆಗಳಿಂದ ಬೆಳಗಾವಿಗೆ ಹೊಸ ರೂಪ ಸಿಕ್ಕಿದೆ ಇನ್ನೇನು ಕೆಲವೇ ತಿಂಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪ್ರಗತಿಯು ಮುಕ್ತಾಯ ಗೊಳ್ಳಲಿದೆ ಎಂದರು .
TV24 News Desk
the authorTV24 News Desk

Leave a Reply